ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಜಯಂತಿ: ಮೋದಿ ಸೇರಿದಂತೆ ರಾಜಕೀಯ ಗಣ್ಯರಿಂದ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ 105ನೇ ಜಯಂತಿ. ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿರಾ ಗಾಂಧಿಯವರಿಗೆ  ಗೌರವ ನಮನ ಸಲ್ಲಿಸಿದ್ದಾರೆ.

ಇಂದು ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಇಂದಿರಾಗಾಂಧಿ ಅವರ ಜನ್ಮದಿನ ಹಿನ್ನೆಲೆ ಗೌರವ ನಮನ ಸಲ್ಲಿಸಿದರು.

ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದಂದು ಶಕ್ತಿ ಸ್ಥಳಕ್ಕೆ ತೆಳಿ ಪುಷ್ಪ ನಮನ ಸಲ್ಲಿಸಿದರು.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡಾ ಅವರು ಸಹ ಮಾಜಿ ಪ್ರಧಾನಿ # ಇಂದಿರಾಗಾಂಧಿ ಅವರ ಜನ್ಮದಿನದಂದು ಶಕ್ತಿ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದರು.

ಇಂದಿರಾ ಗಾಂಧಿಯವರು ನವೆಂಬರ್ 19, 1917 ರಂದು ಅಲಹಾಬಾದ್‌ನ ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ ಜನಿಸಿದರು. 1966 ರಲ್ಲಿ ನಮ್ಮ ದೇಶದ ಮೂರನೇ ಪ್ರಧಾನ ಮಂತ್ರಿ ಮತ್ತು ಭಾರತದ ಮೊದಲ ಮಂತ್ರಿಯಾಗಿ ಆಯ್ಕೆಯಾದರು. ಇಂದಿಗೂ ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿ ಇಂದಿರಾಗಾಂಧಿ ಹೆಸರೇ ಇದೆ. ಪ್ರಧಾನ ಮಂತ್ರಿಯಾಗಿ ದೇಶಸೇವೆ ಮಾಡಿದ ಇಂದಿರಾ ಗಾಂಧಿ ಅಕ್ಟೋಬರ್ 31, 1984 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!