ಅನಾಥ ಮಕ್ಕಳನ್ನು ಸಾಕಿ ಸಲುಹಿದ್ದ ಜಾಮ್ ಸಾಹೇಬ್ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾವಿರಾರು ಅನಾಥ ಮಕ್ಕಳನ್ನು ಸಲಹಿದ್ದ ಜಾಮ್ ಸಾಹಿಬ್ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸಿದ್ದಾರೆ.

ಪೋಲೆಂಡ್​ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಯಹೂದಿ ಮಕ್ಕಳ ಜೀವ ಉಳಿಸಿದ್ದ ಮಹಾರಾಜ ಜಾಮ್ ಸಾಹೇಬರನ್ನು ನೆನೆದಿದ್ದಾರೆ.

ನವನಗರದ ಮಹಾರಾಜ ಜಾಮ್ ಸಾಹೇಬ್ ಪೋಲೆಂಡ್​ನಿಂದ ಭಾರತಕ್ಕೆ ಕರೆತರುವ ಮೂಲಕ ಅನೇಕ ಯಹೂದಿಗಳ ಜೀವವನ್ನು ಉಳಿಸಿದ್ದರು ಮಾತ್ರವಲ್ಲದೆ ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬುಧವಾರ ಪೋಲೆಂಡ್ ತಲುಪಿದ್ದಾರೆ. ಪೋಲೆಂಡ್‌ನ 1000 ಅನಾಥ ಮಕ್ಕಳನ್ನು ಪೋಷಕರಾಗಿ ಬೆಳೆಸಿದ ಭಾರತೀಯ ಮಹಾರಾಜರ ಹೆಸರನ್ನು ಈ ಸ್ಮಾರಕಕ್ಕೆ ಇಡಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!