Wednesday, August 17, 2022

Latest Posts

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ನೆನಪಿಸಿದ ಪ್ರಧಾನಿ ಮೋದಿ ಫೋಟೊ ಈಗ ಟ್ರೆಂಡಿಂಗ್

ಹೊಸದಿಗಂತ ಆನ್ಲೈನ್ ಡೆಸ್ಕ್:

“ದೂರದ ವಿಮಾನಯಾನ ಇದ್ದಾಗ ಕಡತಗಳನ್ನು ಪರಿಶೀಲಿಸುವುದಕ್ಕೆ ಸಮಯ ಸಿಗುತ್ತದೆ” ಹಾಗಂತ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಾವು ವಿಮಾನದಲ್ಲಿ ಕಡತಗಳನ್ನು ಪರಿಶೀಲಿಸುತ್ತಿರುವ ಫೋಟೊ ಒಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಅದೀಗ ಭಾರಿ ವೈರಲ್ ಆಗುತ್ತಿದೆ.

ಜನ, ಅದರಲ್ಲೂ ಮೋದಿ ಅಭಿಮಾನಿಗಳು ಕೇವಲ ಈ ಫೋಟೊವನ್ನು ಹಂಚಿಕೊಳ್ಳುತ್ತಿಲ್ಲ. ಬದಲಿಗೆ ಈ ಚಿತ್ರವನ್ನಿಟ್ಟುಕೊಂಡು ಹಲವು ಹೋಲಿಕೆಗಳನ್ನು ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆಗಳನ್ನು ಕೊಂಡಾಡುತ್ತಿದ್ದಾರೆ. 

ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರಶಂಸಾತ್ಮಕ ಅಭಿಪ್ರಾಯಗಳು ಹೀಗಿವೆ.

ಇದು ದೇಶದ ಇನ್ನೊಬ್ಬ ಜನಪ್ರಿಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ನೆನಪಿಸುತ್ತಿದೆ. ಅವರು ಸಹ ವಿಮಾನಯಾನ ಸಮಯವನ್ನು ವ್ಯರ್ಥ ಮಾಡದೇ ಕಡತಗಳ ಪರಿಶೀಲನೆಯಲ್ಲಿ ನಿರತರಾಗಿರುತ್ತಿದ್ದರು.

ಕೆಲವು ರಾಜಕೀಯ ವಂಶಸ್ಥರು ಐಶಾರಾಮಿ ವಿಮಾನಯಾನದಲ್ಲಿದ್ದುಕೊಂಡು ತಮ್ಮ ಹುಟ್ಟಿದ ದಿನ ಆಚರಿಸಿಕೊಳ್ಳುತ್ತಿದ್ದರು, ಆದರೆ ಮೋದಿ ಇದನ್ನು ದೇಶದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ವ್ಯಕ್ತವಾಗುತ್ತಿರುವ ಇನ್ನೊಂದು ಅಭಿಪ್ರಾಯ.

ಪ್ರಭಾವಿ ಪತ್ರಕರ್ತರ ಬಗ್ಗೆ ಅಯ್ಯೋ ಪಾಪ ಎನಿಸುತ್ತಿದೆ. ಏಕೆಂದರೆ ಮನಮೋಹನ ಸಿಂಗರ ಕಾಲದಲ್ಲಿ ಅವರು ತಮ್ಮ ವಿದೇಶಿ ಭೋಟಿಗಳ ಸಂದರ್ಭದಲ್ಲಿ ದಂಡು ದಂಡು ಪತ್ರಕರ್ತರನ್ನು ಕರೆದೊಯ್ಯುತ್ತಿದ್ದರು. ಈಗ ಅಂಥ ವೈಭೋಗಗಳೆಲ್ಲ ತಪ್ಪಿವೆ ಅಂತಲೂ ಕೆಲವರು ಕಾಲೆಳೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!