ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸ ತೆಗೆದ ಪ್ರಧಾನಿ, ವಿಡಿಯೋ ಪೋಸ್ಟ್‌ ಮಾಡಿದ ಕೇಂದ್ರ ಮಂತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಚ್ಛ ಭಾತರದ ಕನಸು ಕಂಡ ಪ್ರಧಾನಿ ಮೋದಿಯವರು ಅದರತ್ತ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಮಾಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯೆಂಬಂತೆ ಐಟಿಪಿಒ ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಸ್ವತಃ ಮೋದಿಯವರು ತಮ್ಮ ಕೈಯಿಂದ ಎತ್ತಿ ಬುಟ್ಟಿಗೆ ಹಾಕಿರುವ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ITPO ಸುರಂಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುರಂಗ ಮಾರ್ಗ ಪರಿಶೀಲನೆ ವೇಳೆ ಸುತ್ತಮುತ್ತಲೂ ಬಿದ್ದಿದ್ದ ಕಸವನ್ನು ಗಮನಿಸಿದ ಮೋದಿ ತಮ್ಮ ಕೈಯಿಂದ ತೆರವುಗೊಳಿಸಿದ್ದಾರೆ.

ಪ್ರಗತಿ ಮೈದಾನದ ಪುನರಾಭಿವೃದ್ಧಿಯ ಭಾಗವಾಗಿರುವ ಸುರಂಗ ಮಾರ್ಗ ಮತ್ತು 5 ಅಂಡರ್‌ಪಾಸ್‍ಗಳ ಉದ್ಘಾಟನಾ ಕಾರ್ಯಕ್ರಮ ನಂತರ ಈ ವೀಡಿಯೋ ವೈರಲ್ ಆಗುತ್ತಿದೆ. ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯನ್ನು 920 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರ ಸರಕಾರವೇ ಅನುದಾನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!