ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆಯೇ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆಯೇ ಹೆಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ “ಜೈ ವಿಜ್ಞಾನ, ಜೈ ಅನುಸಂಧಾನ” ಘೋಷಣೆಯನ್ನು ಮೊಳಗಿಸಿದರು.
“ನಾನು ದೇಶದಲ್ಲಿ ಇಲ್ಲದಿದ್ದರೂ ಚಂದ್ರಯಾನದ ಯಶಸ್ಸಿನ ಸಂತೋಷವನ್ನು ನನ್ನಿಂದ ತಡೆಯಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ನಾನು ಭಾರತಕ್ಕೆ ಬರುತ್ತಿದ್ದಂತೆ ಮೊದಲು ಬೆಂಗಳೂರಿಗೆ ಭೇಟಿ ನೀಡಿ ನಮ್ಮ ವಿಜ್ಞಾನಿಗಳೊಂದಿಗೆ ಮಾತನಾಡಲು ಕಾತರನಾಗಿದ್ದೇನೆ ಎಂದರು” ಎಂದು ಹೆಚ್‌ಎಎಲ್ ಏರ್ಪೋರ್ಟ್ನಿಂದ ಇಸ್ರೋ ಕೇಂದ್ರಕ್ಕೆ ಹೊರಡುವ ಮುನ್ನ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಈ ವೇಳೆ ಜನ ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದಾಗ ಅದನ್ನು ತಡೆದು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂಬ ಮೋದಿ ಘೋಷಣೆ ಕೂಗಿದರು.