ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ಶೋ, 5 ಕಿ.ಮೀ. ವ್ಯಾಪ್ತಿಯ ಮನೆ, ಅಂಗಡಿ ಮಾಲೀಕರಿಗೆ ನೋಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಕಾವು ರಂಗೇರುತ್ತಿದ್ದು, ಪ್ರಧಾನಿ ಮೋದಿ ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಎರಡು ದಿನಗಳ ರಾಜ್ಯ ಪ್ರವಾಸವಿದ್ದು, ಐದು ಕಿ.ಮೀ ರೋಡ್ ಶೋ ನಡೆಸಲಿದ್ದಾರೆ.

ಪ್ರಧಾನಿ ಮೋದಿ ರೋಡ್‌ಶೋ ನಡೆಯುವ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್‌ಶೋ ನಡೆಯಲಿದೆ.

ಒಟ್ಟಾರೆ 5.5 ಕಿ.ಮೀ ರೋಡ್‌ಶೋ ಇದಾಗಿದ್ದು, ಇಲ್ಲಿ ಬರುವ ಅಂಗಡಿಗಳು, ಮನೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ವಾಸಿಸುವ ಜನರ ಹೆಸರು, ವಿಳಾಸ, ನಂಬರ್, ಸಂಪೂರ್ಣ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ.

ಕಟ್ಟಡಗಳಲ್ಲಿ ಹೆಚ್ಚು ಅಲರ್ಟ್ ಆಗಿರಬೇಕು, ಅನುಮಾನಾಸ್ಪದವಾಗಿ ಕಾಣಿಸಿದಾಗ ಪೊಲೀಸರಿಗೆ ಮಾಹಿತಿ ನೀಡಬೇಕು, ಅಪರಿಚಿತರನ್ನು ಮನೆಯ ಮಹಡಿ ಮೇಲೆ ಬಿಟ್ಟುಕೊಳ್ಳುವಂತಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!