Monday, September 25, 2023

Latest Posts

ಮನ್‌ ಕಿ ಬಾತ್‌ನಲ್ಲಿ ಅಮೆರಿಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

100ಕ್ಕೂ ಹೆಚ್ಚು ಅಪರೂಪದ ಮತ್ತು ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿರುವ ಅಮೆರಿಕ ಸರ್ಕಾರಕ್ಕೆ ಮನ್‌ ಕಿ ಬಾತ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

“ಕೆಲವು ದಿನಗಳ ಹಿಂದೆ, ಅಮೆರಿಕವು 100 ಕ್ಕೂ ಹೆಚ್ಚು ಅಪರೂಪದ ಮತ್ತು ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿತ್ತು. ಈ ಕಲಾಕೃತಿಗಳು 250 ರಿಂದ 2500 ವರ್ಷಗಳಷ್ಟು ಹಳೆಯವು. ಈ ಅಪರೂಪದ ಮತ್ತು ಅಮೂಲ್ಯ ವಸ್ತುಗಳು ದೇಶದ ವಿವಿಧ ಪ್ರದೇಶಗಳಿಗೆ ಸೇರಿವೆ ಎಂದು ಪಿಎಂ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೊ ಪ್ರಸಾರ ‘ಮನ್ ಕಿ ಬಾತ್’ನಲ್ಲಿ ಹೇಳಿದರು.

“ನಮ್ಮ ಹೆಮ್ಮೆಯ ಪರಂಪರೆಗೆ ಸಾಕ್ಷಿಯಾಗಿರುವ ಈ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕಾಗಿ ನಾನು ಅಮೆರಿಕ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. 2016 ಮತ್ತು 2021 ರಲ್ಲಿ ನಾನು ಅಮೆರಿಕಗೆ ಭೇಟಿ ನೀಡಿದ ಸಂದರ್ಭದಲ್ಲೂ, ಇದೇ ರೀತಿಯ ಅನೇಕ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು” ಎಂದರು.

ʻಈ ಅಮೂಲ್ಯ ಕಲಾಕೃತಿಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ತವರಿಗೆ ಮರಳುವುದು ನಮ್ಮ ಪರಂಪರೆ ಮತ್ತು ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆʼ ಎಂದು ಅಮೆರಿಕ ಪೋಸ್ಟ್‌ ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!