Monday, July 4, 2022

Latest Posts

ಪ್ರಧಾನಿ ಮೋದಿಯಿಂದ ಡಿ. 13ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ: ಏನಿದರ ವಿಶೇಷತೆ?

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13 ರಂದು ಉತ್ತರ ಪ್ರದೇಶದಕ್ಕೆ ಭೇಟಿನೀಡಲಿದ್ದು, ಬಹುಕೋಟಿ ವೆಚ್ಚದ ಕಾಶಿ ವಿಶ್ವನಾಥ್ ಕಾರಿಡಾರ್‌ನ್ನು ಉದ್ಘಾಟಿಸಲಿದ್ದಾರೆ.

ಸುಮಾರು 800 ಕೋಟಿ ರೂ. ವೆಚ್ಚಿದ ಈ ಕಾರಿಡಾರ್ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಹಿಂದಿನ ವಾಸ್ತುಶಿಲ್ಪಿ ಭೀಮಲ್ ಪಟೇಲ್ ವಿನ್ಯಾಸಗೊಳಿಸಿದ್ದಾರೆ.

ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆ ವೇಳೆ  ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿಯವರ ಕನಸಿನ ಯೋಜನೆ ಎಂದು ಹೇಳಲಾಗುವ ಈ ಕಾರಿಡಾರ್ ದೇವಾಲಯ ಮತ್ತು ಗಂಗಾ ನದಿಯ ನಡುವೆ ಕಡಿಮೆ ಅವಧಿಯಲ್ಲಿ ನೇರ ಸಂಪರ್ಕವನ್ನು ಸ್ಥಾಪಿಸಲಿದೆ.

ಮರು ಅಭಿವೃದ್ದಿ ಯೋಜನೆಯ 1ನೇ ಹಂತದ ಉದ್ಘಾಟನೆಯ ನಂತರ ದೇವಾಲಯದ ಆವರಣವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಎರಡನೇ ಹಂತವು ಗಂಗಾನದಿಯ ದಡಗಳ ಪುನರಾಭಿವೃದ್ಧಿಯನ್ನು ಒಳಗೊಂಡಿರುತ್ತದೆ ಮತ್ತು ಮುಂದಿನ ವರ್ಷ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.

ಕಾಶಿ ವಿಶ್ವನಾಥ ಧಾಮ್ ಕಾರಿಡಾರ್‌ನಲ್ಲಿ, ಒಮ್ಮೆ ದೇವಾಲಯವನ್ನು ಪುನರ್ನಿರ್ಮಿಸಿದ ಮರಾಠ ರಾಣಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ. ಕಾರಿಡಾರ್‌ನ ಉದ್ಘಾಟನೆಯ  ಇಡೀ ಕಾರ್ಯಕ್ರಮವನ್ನು ದೇಶಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ.

ಮುಖ್ಯ ದೇವಾಲಯದ ಸುತ್ತಲಿನ ಕಟ್ಟಡಗಳನ್ನು ಕೆಡವಿದ ನಂತರ ನಲವತ್ತು ಪುರಾತನ ದೇವಾಲಯಗಳು ಕಂಡುಬಂದಿವೆ. ಹಿಂದೆ ಮರೆಯಾಗಿದ್ದ ಶತಮಾನಗಳಷ್ಟು ಹಳೆಯದಾದ ಈ ದೇವಾಲಯಗಳು ಈಗ ಗೋಚರಿಸುತ್ತಿವೆ. ಅವುಗಳನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ತೆರೆಯಲಾಗುತ್ತದೆ.

ವಾಸ್ತುಶಿಲ್ಪಿ ಭೀಮಲ್ ಪಟೇಲ್ ಪ್ರಕಾರ, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು ಟೆಂಪಲ್ ಚೌಕ್, ವಾರಣಾಸಿ ಸಿಟಿ ಗ್ಯಾಲರಿ, ವಸ್ತುಸಂಗ್ರಹಾಲಯ, ವಿವಿಧೋದ್ದೇಶ ಸಭಾಂಗಣಗಳು, ಸಭಾಂಗಣ, ಭಕ್ತರ ಅನುಕೂಲ ಕೇಂದ್ರ, ಸಾರ್ವಜನಿಕ ಅನುಕೂಲತೆ,  ಮೋಕ್ಷ ಗೃಹ, ಗೋಡೋಲಿಯಾ ಗೇಟ್, ಭೋಗಶಾಲಾ, ಪುರೋಹಿತರು ಮತ್ತು ಆಧ್ಯಾತ್ಮಿಕ ಪುಸ್ತಕಗಳ ಸಂಗ್ರಹಾಲಯವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss