ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಧರಿಸಿದ ಜಾಕೆಟ್‌ನ ಸ್ಪೆಷಾಲಿಟಿ ಬಗ್ಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ7 ಶೃಂಗಸಭೆಯಲ್ಲಿ ಸುಸ್ಥಿರತೆಯ ಸಂದೇಶ ಸಾರುತ್ತಾ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮರುಬಳಕೆಯ ವಸ್ತುಗಳಿಂದ ಮಾಡಿದ ಜಾಕೆಟ್ ಧರಿಸಿದ್ದರು. ಬಳಸಿದ ಪಿಇಟಿ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಪುಡಿಮಾಡಿ ಕರಗಿಸಿ ಬಣ್ಣ ಸೇರಿಸಿ ಮತ್ತು ನೂಲು ಉತ್ಪಾದಿಸುವ ಮೂಲಕ ಮರುಬಳಕೆಯ ಬಟ್ಟೆಯನ್ನು ತಯಾರಿಸಲಾಗುತ್ತದೆ.

ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ “ಬಹು ಬಿಕ್ಕಟ್ಟುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವುದು” ಅಧಿವೇಶನದಲ್ಲಿ ಮಾತನಾಡಿದ ಪಿಎಂ ಮೋದಿ ನೈಸರ್ಗಿಕ ಸಂಪನ್ಮೂಲಗಳ ಸಮಗ್ರ ಬಳಕೆ ಮತ್ತು ಗ್ರಾಹಕೀಕರಣದಿಂದ ಪ್ರೇರಿತವಾದ ಅಭಿವೃದ್ಧಿ ಮಾದರಿಯನ್ನು ತಿಳಿಸಿದರು.

ಪ್ರಪಂಚದಾದ್ಯಂತ ರಸಗೊಬ್ಬರಗಳಿಗೆ ಪರ್ಯಾಯವಾಗಿ ನೈಸರ್ಗಿಕ ಕೃಷಿಯ ಹೊಸ ಮಾದರಿಯನ್ನು ರಚಿಸುವುದನ್ನು ಮೋದಿ ಒತ್ತಿ ಹೇಳಿದರು. ʻಡಿಜಿಟಲ್ ತಂತ್ರಜ್ಞಾನದ ಪ್ರಯೋಜನವನ್ನು ಪ್ರಪಂಚದ ಪ್ರತಿಯೊಬ್ಬ ರೈತನಿಗೂ ಕೊಂಡೊಯ್ಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದರುʼ.

ಪ್ರಧಾನಿ ಮೋದಿ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ಜಾಕೆಟ್ ಅನ್ನು ಧರಿಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋಳಿಲ್ಲದ ಆಕಾಶ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಅದು ಸಾಮಾನ್ಯ ಜಾಕೆಟ್ ಅಲ್ಲ, ಫೆಬ್ರವರಿ 6 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮದಿಗೆ ಉಡುಗೊರೆಯಾಗಿ ನೀಡಲಾದ ಜಾಕೆಟ್ ಅನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳನ್ನು ಬಳಸಿ ತಯಾರಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!