ಮೇ 19ರಿಂದ ಜಪಾನ್‌ ಸಹಿತ ಮೂರು ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿ-7ಶೃಂಗಸಭೆ, ಚತುರ್ಭುಜ ರಾಷ್ಟ್ರಗಳ ಸಭೆ ಹಾಗೂ ಎಫ್ಐಪಿಐಸಿ ಸಭೆಯ ಹಿನ್ನೆಲೆ ಮೇ19 ರಿಂದ ಪ್ರಧಾನಿ ಮೋದಿ, ಜಪಾನ್‌ ಸಹಿತ ಮೂರು ರಾಷ್ಟ್ರಗಳ ಪ್ರವಾಸ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇ 19 ರಂದು ಜಪಾನ್‌ನ ಹಿರೋಶಿಮಾಗೆ ಭೇಟಿ ನೀಡಲಿರುವ ಮೋದಿ, 21ರ ವರೆಗೆ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸದಸ್ಯರಾಷ್ಟ್ರಗಳ ಜೊತೆಗೆ ವಿವಿಧ ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಮೇ 22ರಂದು ಪಪುವಾ ನ್ಯೂಗಿನಿ ಯಾಗೆ ಮೋದಿ ಭೇಟಿ ನೀಡಿ ಇಂಡಿಯಾ-ಪೆಸಿಫಿಕ್‌ ಐಲೆಂಡ್‌ ಕೋ-ಆಪರೇಶನ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿರುವ ಪ್ರಧಾನಿ ಮೇ.24ರ ವರೆಗೆ ನಡೆಯಲಿರುವ ಕ್ವಾಡ್‌ ಶೃಂಗಸಭೆಗೆ ಹಾಜರಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!