ಫಿಜಿ, ಪಪುವಾ ನ್ಯೂ ಗಿನಿ ದೇಶಗಳಿಂದ ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನ ಹಿರೋಷಿಮಾಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿ ಹಾಗೂ ಪಪುವಾ ನ್ಯೂ ಗಿನಿ ದೇಶದ ಅತ್ಯುನ್ನತ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಫಿಜಿ ದೇಶ ಈ ಗೌರವ ನೀಡಿದೆ.

ಪ್ರಧಾನಿಯವರ ಜಾಗತಿಕ ನಾಯಕತ್ವಕ್ಕಾಗಿ ಫಿಜಿಯ ಸಹವರ್ತಿ ಸಿತಿವೇನಿ ರಬುಕಾ ಅವರು “ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ” ಪ್ರಶಸ್ತಿಯನ್ನು ನೀಡಿದ್ದಾರೆ. ಇದು ಫಿಜಿಯೇತರರಿಗೆ ದೊರೆತ ಅಪರೂಪದ ಗೌರವ ಎಂಬುದು ಇಲ್ಲಿ ತಿಳಿಯಬೇಕಾದ ವಿಚಾರ.

ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ್ದಾರೆ. ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅಚ್ಚರಿ ಎಂಬಂತೆ, ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿಯ ಅತ್ಯುನ್ನತ ಗೌರವವನ್ನು ನೀಡಲಾಗಿದೆ.

ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್‌ ಮಾಡಿದ್ದು “ಭಾರತಕ್ಕೆ ದೊಡ್ಡ ಗೌರವ. ಪ್ರಧಾನಿ ಮೋದಿಯವರಿಗೆ ಫಿಜಿಯ ಪ್ರಧಾನ ಮಂತ್ರಿ, ಫಿಜಿಯ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಿದ್ದಾರೆ. ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಪ್ರಶಸ್ತಿ ನೀಡಲಾಗಿದೆ’’ ಎಂದು ಮಾಹಿತಿ ನೀಡಿದೆ.

ಅದಲ್ಲದೆ ಉಭಯ ದೇಶಗಳ ನಡುವಿನ ವಿಶೇಷ ಮತ್ತು ನಿರಂತರ ಬಾಂಧವ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತದ ಜನರಿಗೆ ಮತ್ತು ಫಿಜಿ-ಭಾರತೀಯ ಸಮುದಾಯದ ಪೀಳಿಗೆಗೆ ಪ್ರಧಾನಿ ಮೋದಿ ಅವರು ಈ ಅತ್ಯುನ್ನತ ಗೌರವವನ್ನು ಸಮರ್ಪಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಈ ಬಗ್ಗೆ ಟ್ವೀಟ್‌ ಮೂಲಕ ತಿಳಿಸಿದೆ.

ಫಿಜಿ ತಮ್ಮ ದೇಶದ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿಗೆ ನೀಡಿದ ಬೆನ್ನಲ್ಲೇ ಪಪುವಾ ನ್ಯೂಗಿನಿ ಸಹ ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿದೆ. ಈ ಹಿನ್ನೆಲೆ ಭಾರತಕ್ಕೆ ಮತ್ತೊಂದು ಅಭೂತಪೂರ್ವ ಗೌರವ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!