Wednesday, August 10, 2022

Latest Posts

ಕೊರೋನಾ ಲಸಿಕೆ ಪಡೆದ ಪ್ರಧಾನಿ| ಒಂದೇ ನಡೆಯಲ್ಲಿ 3 ಸಂದೇಶ ರವಾನಿಸಿದ ಮೋದಿ: ಸಂಸದ ತೇಜಸ್ವಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಮೊದಲ ಡೋಸ್ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಟೀಕಾಕಾರರಿಗೆ ಮೂರು ಸಂದೇಶಗಳನ್ನು ರವಾನಿಸಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಪ್ರಧಾನಿಯವರು ತಮ್ಮ ಒಂದು ನಡೆಯಿಂದ ಟೀಕಾಕಾರರಿಗೆ ಒಟ್ಟಿಗೆ ಮೂರು ಸಂದೇಶ ರವಾನಿಸಿದ್ದಾರೆ.
1) ಮೋದಿಯವರು ಕೋವಿಡ್ ಲಸಿಕೆ ಮಾರ್ಗಸೂಚಿಯ ಅನ್ವಯ ಹಿರಿಯ ನಾಗರಿಕರಿಗೆ ಲಸಿಕೆ ಹಾಕುವ ಹಂತದವರೆಗೂ ಕಾದು ಇದೀಗ ಲಸಿಕೆ ಪಡೆದಿದ್ದಾರೆ.
2) ತಾವೇ ಕೋವಿಡ್ ಲಸಿಕೆ ಪಡೆಯುವ ಮೂಲಕ ಲಸಿಕೆ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದ್ದಾರೆ.
3) ಅವರು ಬಯಸಿದ್ದರೆ ಅವರ ನಿವಾಸದಲ್ಲಯೇ ಲಸಿಕೆ ಪಡೆಯಬಹುದುತ್ತು. ಆದರೆ ಅವರು  ಜನಸಾಮಾನ್ಯರಂತೆ ಸರ್ಕಾರಿ ಆಸ್ಪತ್ರೆಯಲ್ಲಿನ ಲಸಿಕೆ ವಿತರಣಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇಂದು ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಸ್ವರೂಪದ ಅನ್ಯ ವಾಧಿಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಕೊರೋನಾ ವಿರುದ್ಧ ದೇಶವು ವಿಜಯ ಸಾಧಿಸುವ ಭರವಸೆಯನ್ನು ದೇಶದ ಜನತೆ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss