Sunday, April 18, 2021

Latest Posts

ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ನರೇಂದ್ರ ಮೋದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೊರೋನಾ ಎರಡನೇ ಡೋಸ್ ಲಸಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪಡೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನಾನು ಕೋವಿಡ್ ಲಸಿಕೆಯ ಎರಡನೇ ಡೋಸ್ ನ್ನು ಏಮ್ಸ್ ಆಸ್ಪತ್ರೆಯಲ್ಲಿ  ಪಡೆದಿದ್ದೇನೆ. ಕೊರೋನಾ ಮಹಾಮಾರಿ ವಿರುದ್ಧ ಹೋರಾಡಲು ಕೆಲವು ವಿಧಾನಗಳಲ್ಲಿ ಲಸಿಕೆ ಕೂಡ ಒಂದು. ಅರ್ಹರು ಲಸಿಕೆಯನ್ನು ಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ಪುದುಚೇರಿಯ ಪಿ. ನಿವೇದ ಮತ್ತು ಪಂಜಾಬ್​ನ ನಿಶಾ ಶರ್ಮಾ ಎಂಬ ಇಬ್ಬರು ನರ್ಸ್​ಗಳು ಮೋದಿ ಅವರಿಗೆಲಸಿಕೆಯನ್ನು ಹಾಕಿದ್ದಾರೆ, ಮಾರ್ಚ್ 1 ರಂದು  ಮೋದಿಯವರು ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss