Wednesday, March 29, 2023

Latest Posts

ಜೈಪುರ: ಮಹಾಖೇಲ್‌ನಲ್ಲಿ ಭಾಗವಹಿಸುವವರೊಂದಿಗೆ ಪ್ರಧಾನಿ ಮೋದಿ ಸಂವಾದ

ಹೊಸದಿಗಂತ ಡಿಜಿಟಲ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೈಪುರ ಮಹಾಖೇಲ್‌ನಲ್ಲಿ ಭಾಗವಹಿಸುವವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. 2017 ರಿಂದ ಜೈಪುರ ಗ್ರಾಮಾಂತರದ ಲೋಕಸಭಾ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಜೈಪುರದಲ್ಲಿ ಜೈಪುರ ಮಹಾಖೇಲ್ ಅನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಸಹ ಕಾರ್ಯಕ್ರಮ ಮುಂದುವರೆದಿದ್ದು, ಪ್ರಧಾನಿ ಇಂದು ಅಲ್ಲಿ ಭಾಗವಹಿಸುವವರೊಂದಿಗೆ ಸಂವಾದ ನಡೆಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಜೈಪುರ್ ಮಹಾಖೇಲ್’ ನಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಈ ವರ್ಷ ಕಬಡ್ಡಿ ಸ್ಪರ್ಧೆಯನ್ನು ಕೇಂದ್ರೀಕರಿಸಿರುವ ಮಹಾಖೇಲ್ ಜನವರಿ 12  ರಾಷ್ಟ್ರೀಯ ಯುವ ದಿನದಂದು ಪ್ರಾರಂಭವಾಯಿತು.

ಜೈಪುರ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ 450 ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು, ಪುರಸಭೆಗಳು ಮತ್ತು ವಾರ್ಡ್‌ಗಳಿಂದ 6400 ಕ್ಕೂ ಹೆಚ್ಚು ಯುವಕರು ಮತ್ತು ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!