IPL 2023| ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ನೂತನ ನಾಯಕನ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಮುಂಬರುವ ಆವೃತ್ತಿಗೆ ಪಂಜಾಬ್‌ ಕಿಂಗ್ಸ್ ನೂತನ ನಾಯಕನನ್ನು ನೇಮಿಸಿದೆ. ಪಿಬಿಕೆಎಸ್ ಫ್ರಾಂಚೈಸ್‌ನ ಹೊಸ ನಾಯಕನಾಗಿ ಭಾರತದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಆಯ್ಕೆಯಾಗಿದ್ದಾರೆ. ಧವನ್‌ ಮುಂದಿನ ಆವೃತ್ತಿಯಲ್ಲಿ ಪಂಜಾಬ್ ನಾಯಕರಾಗಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಬದಲಾಯಿಸಲಿದ್ದಾರೆ.
ಪಂಜಾಬ್ ಕಿಂಗ್ಸ್ ಟ್ವಿಟರ್‌ನಲ್ಲಿ ಈ ವಿಚಾರವನ್ನು ದೃಢಪಡಿಸಿದೆ. “ಗಬ್ಬರ್ ಪಂಜಾಬ್ ಕಿಂಗ್ಸ್‌ಗಾಗಿ ಶಿಖರದಲ್ಲಿ ಇರಲಿದ್ದಾರೆ. ನಿಮ್ಮ ನಾಯಕನನ್ನು ಸ್ವಾಗತಿಸಿ! ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದೆ.
ಐಪಿಎಲ್ 2022 ರ ಆರಂಭದ ಮೊದಲು ಭಾರತದ ಆರಂಭಿಕ ಆಟಗಾರ ಅಗರ್ವಾಲ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 8.25 ಕೋಟಿ ಭಾರಿ ಮೊತ್ತಕ್ಕೆ ಧವನ್‌ ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ಐಪಿಎಲ್ 2022 ರಲ್ಲಿ ಧವನ್ 14 ಪಂದ್ಯಗಳಲ್ಲಿ 460 ರನ್ ಕಲೆಹಾಕಿದ್ದರು. 36ರ ಹರೆಯದ ಧವನ್‌ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ನಾಯಕರಾಗಿ ಗಮನ ಸೆಳೆಯುತ್ತಿದ್ದಾರೆ. ನ. 25 ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಾಂಚೈಸಿ ಮಾಯಾಂಕ್‌ ಅಗರ್ವಾಲ್‌ ರನ್ನು ತಂಡದಲ್ಲೇ ಉಳಿಸಿಕೊಳ್ಳಲಿದೆಯೇ ಎಂಬ ವಿಚಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!