Saturday, October 1, 2022

Latest Posts

ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಭಾರತ ಎ ತಂಡ ಪ್ರಕಟ: ಪ್ರಿಯಾಂಕ್‌ ಕ್ಯಾಪ್ಟನ್‌, ಪ್ರಸಿದ್ಧ್ ಗೆ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನ್ಯೂಜಿಲೆಂಡ್ ‘ಎ’ ವಿರುದ್ಧದ ಸರಣಿಗೆ ಭಾರತ ‘ಎ’ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ನ್ಯೂಜಿಲೆಂಡ್ ‘ಎ’ ತಂಡವು ಮೂರು ನಾಲ್ಕು ದಿನಗಳ ಪಂದ್ಯಗಳು ಮತ್ತು ಅನೇಕ ಏಕದಿನ ಪಂದ್ಯಗಳಿಗಾಗಿ ಭಾರತದ ಪ್ರವಾಸಕ್ಕೆ ಆಗಮಿಸಲಿದೆ.
ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ‘ಎ’ ತಂಡವನ್ನು ಪ್ರಿಯಾಂಕ್ ಪಾಂಚಾಲ್ ಮುನ್ನಡೆಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಮತ್ತು ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ರಜತ್ ಪಾಟಿದಾರ್ ಮತ್ತು ದೇಶೀಯ ಟೂರ್ನಿಗಳಲ್ಲಿ ರನ್‌ಗಳ ರಾಶಿಯನ್ನೇ ಪೇರಿಸಿರುವ ಸರ್ಫರಾಜ್ ಖಾನ್ ತಂಡದಲ್ಲಿದ್ದಾರೆ. ವೇಗಿ ಉಮ್ರಾನ್ ಮಲಿಕ್ ಕೂಡ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ಎ ತಂಡವು ಮೂರು ನಾಲ್ಕು ದಿನಗಳ ಪಂದ್ಯಗಳು ಮತ್ತು ಏಕದಿನ ಪಂದ್ಯಗಳ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 1 ರಂದು ಬೆಂಗಳೂರಿನಲ್ಲಿ ಉಭಯ ತಂಡಗಳ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ರೆಡ್ ಬಾಲ್ ಪಂದ್ಯಗಳು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಚೆನ್ನೈನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಗೆ ತಂಡವನ್ನು ನಂತರ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.
ತಂಡದಲ್ಲಿರುವ ಕೆಲವು ಪ್ರಮುಖ ಹೆಸರುಗಳಲ್ಲಿ ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ಚಹಾರ್, ಪ್ರಸಿದ್ಧ್ ಕೃಷ್ಣ ಮತ್ತು ಕೆಎಸ್ ಭರತ್ ಸೇರಿದ್ದಾರೆ.

ಭಾರತ ಎ ತಂಡ:
ಪ್ರಿಯಾಂಕ್ ಪಾಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆಎಸ್ ಭರತ್ (WK), ಉಪೇಂದ್ರ ಯಾದವ್ (WK), ಕುಲದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹಾರ್ , ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಯಶ್ ದಯಾಳ್, ಅರ್ಜನ್ ನಾಗವಾಸ್ವಾಲ್ಲಾ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!