Sunday, August 14, 2022

Latest Posts

ಎಲ್ಲರಿಗೂ ಸಲ್ಲುವ ಕವಿ ಎಂದೇ ಖ್ಯಾತರಾಗಿದ್ದ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಇನ್ನಿಲ್ಲ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಖ್ಯಾತ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಂದು ನಿಧನರಾಗಿದ್ದಾರೆ.
ಎಲ್ಲರಿಗೂ ಸಲ್ಲುವ ಕವಿ ಎಂದೇ ಪ್ರಸಿದ್ಧರಾಗಿದ್ದ ಲಕ್ಷ್ಮಿನಾರಾಯಣ ಭಟ್ಟರು ಇನ್ನು ನೆನಪು‌ ಮಾತ್ರ.
ಕನ್ನಡ ಭಾವಗೀತೆಗಳ ಮೂಲಕ ಜನರ ಮನಸ್ಸಿನ ಆಳ ತಟ್ಟಿದ ಕವಿ ಶಿವಮೊಗ್ಗ ಜಿಲ್ಲೆಯಲ್ಲಿ  ಜನಿಸಿದ್ದರು.
ಬೆಂಗಳೂರು ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದು, ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದರು.
ನಿನ್ನದೆ ನನ್ನ ಮಾತು, ಹೊಳೆಯ ಸಾಲಿನ ಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ ಕವನ ಸಂಕಲನಗಳನ್ನು ಲಕ್ಷ್ಮೀ ನಾರಾಯಣ ಭಟ್ಟ ಬರೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss