spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 27, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು Online ಶಾಪಿಂಗ್ ಮಾಡುತ್ತೀರಾ? ಹಾಗಿದ್ದರೆ ಈ ಅಂಶಗಳನ್ನು ತಪ್ಪದೇ ನೆನಪಿಡಿ

- Advertisement -Nitte

ಕೆಲವೊಮ್ಮೆ ಈ ಆನ್ ಲೈನ್ ಶಾಪಿಂಗ್ ಮಾಡುವಾಗ ಖುಷಿ ಕೊಟ್ಟರೆ ಮತ್ತೆ ಕೆಲವೊಮ್ಮೆ ನಮಗೆ ಈ ಹಣಕಾಸಿನದ್ದೇ ಚಿಂತೆ. ಯಾವ ವೆಬ್ ಸೈಟ್ ನಲ್ಲಿ ಯಾವೆಲ್ಲಾ ರೀತಿ ನಮ್ಮ ಡೀಟೇಲ್ಸ್ ಹ್ಯಾಕ್ ಮಾಡಬಹುದು, ಪ್ರಾಡಕ್ಟ್ ಸರಿಯಾಗಿ ಇರುತ್ತಾ? ಅಂತೆಲ್ಲಾ ಯೋಚನೆ ಬರೋದು ಸಹಜ. ಇನ್ನು ಮುಂದೆ ಆನ್ ಲೈನ್ ಶಾಪಿಂಗ್ ಮಾಡುವಾಗ ಈ ಅಂಶಗಳನ್ನು ನೆನಪಿಡಿ.

  • Product Info: ನೀವು ಖರೀದಿಸಬೇಕು ಅಂತಿರುವ ಪ್ರಾಡೆಕ್ಟ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ನೀವು ಸರ್ಚ್ ಮಾಡುತ್ತಿರುವ ವೆಬ್ ನಲ್ಲಿ ಯಾವ ಕ್ವಾಲಿಟಿ ಪ್ರಾಡಕ್ಟ್ ಸಿಗುತ್ತೆ ಅಂತ ಗಮನಿಸಿ.
  • Shipping: ನೀವು ಖರೀದಿಸುವ ಪ್ರಾಡೆಕ್ಟ್ ಕೆಲವೊಮ್ಮೆ ಡ್ಯಾಮೇಜ್ ಅಥವಾ ಬೇರೆಯೇ ಪ್ರಾಡೆಕ್ಟ್ ನಿಮ್ಮ ಕೈ ಸೇರಿರಬಹುದು. ಹಾಗಾಗಿ ನೀವು ಆರ್ಡರ್ ಮಾಡುವ ಮುನ್ನ ಶಿಪ್ಪಿಂಗ್ ಡೀಟೇಲ್ಸ್ ನಲ್ಲಿ ರಿಟರ್ನ್ ಮಾಡುವುದರ ಬಗ್ಗೆ ಖಚಿತಪಡಿಸಿಕೊಳ್ಳಿ.
  • Scam, Fraud: ನೀವು ಶಾಪಿಂಗ್ ಮಾಡುವ ವೆಬ್ ಸೈಟ್ ಗಳು ಎಷ್ಟರ ಮಟ್ಟಿಗೆ ಸೇಫ್ ಎಂದು ಯೋಚಿಸಿ. ಹೊಸ ವೆನ್ ಸೈಟ್ ನಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಗಳನ್ನು ಯಾವುದೇ ಕಾರಣಕ್ಕೂ ಹಾಕಬೇಡಿ. ಇದರಿಂದ ನೀವು ಹಣ ಕಳೆದುಕೊಳ್ಳುತ್ತೀರ.
  • Compare it: ನೀವು ಖರೀಸಲಿಚ್ಛಿಸುವ ಪ್ರಾಡಕ್ಟ್ ನ ಬೆಲೆ, ಕ್ವಾಲಿಟಿಯನ್ನು ಬೇರೆ ವೆಬ್ ಸೈಟ್ ಗಳಲ್ಲೂ ಗಮನಿಸಿ. ಚೀಪ್ ಅಂಡ್ ಬೆಸ್ಟ್ ಇರುವ ಖರೀದಿಸೋದು ಒಳ್ಳೆಯದು.
  • Bank balance: ನೀವು ಆಗಾಗ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡುತ್ತಲೇ ಇರಿ. ಇದರಿಂದ ನಿಮ್ಮ ಹಣ ಯಾರ ಕೈ ಸೇರದಂತೆ ಕಾಪಾಡಿಕೊಳ್ಳಬಹುದು.
  • Say no to Open WIFI: ನೀವು ಎಲ್ಲಾದರೂ ಹೊರಗೆ ಶಾಪಿಂಗ್ ಮಾಡುವಾಗ ಅಲ್ಲಿ ಸಿಗುವ ಓಪನ್ ವೈಫೈ ನಲ್ಲಿ ನೀವು ಯಾವುದೇ ಪೇಮೆಂಟ್ ಮಾಡಬೇಡಿ. ಇದರಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆ ಇದೆ.
  • No card: ನೀವು ಹೊರಗೆ ಶಾಪಿಂಗ್ ಮಾಡುವಾಗ ಆದಷ್ಟು ಕಾರ್ಡ್ ಬಳಸುವ ಬದಲು ಮೊಬೈಲ್ ನಲ್ಲಿಯೇ ಪೇ ಮಾಡೋಕೆ ನೋಡಿ.
  • Speak out: ನಿಮಗೆ ಯಾವ ಸಂಸ್ಥೆಯಿಂದಾದರೂ ಮೋಸವಾಗಿದ್ರೆ ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿಬಿಡಿ. ನಿಮಗೆ ನ್ಯಾಯ ಸಿಗದಿದ್ದಾಗ ಧೈರ್ಯ ಮಾಡಿ ಪೊಲೀಸರಿಗೆ ದೂರು ಕೊಡಿ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss