Wednesday, August 17, 2022

Latest Posts

ವಿಷ ಸೇವಿಸಿದ ಪ್ರೇಮಿಗಳು: ಮಹಿಳೆ ಸಾವು, ಯುವಕ ಗಂಭೀರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ವರದಿ, ಕುಶಾಲನಗರ:

ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಸ್ವಗ್ರಾಮದಿಂದ ಓಡಿ ಬಂದು ಒಂದು ತಿಂಗಳು ಸಂಸಾರ ನಡೆಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ವಿಷ ಸೇವನೆಯಿಂದ ಮಹಿಳೆ ವಿದ್ಯಾ(29) ಸಾವನ್ನಪ್ಪಿದರೆ ವಿಶ್ವನಾಥ್ (35) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ವಿಶ್ವನಾಥ್ ಮತ್ತು ಚಿಕ್ಕನೇರಳ ಗ್ರಾಮದ ವಿದ್ಯಾ (29) ಎಂಬವರಿಗೆ ಈಗಾಗಲೇ ಮದುವೆಯಾಗಿ ಎರಡೆರೆಡು ಮಕ್ಕಳಿದ್ದಾರೆ. ವಿದ್ಯಾ ಎಂಬಾಕೆಯ ಮನೆಗೆ ಗಾರೆ ಕೆಲಸಕ್ಕೆಂದು ವಿಶ್ವನಾಥ್ ತೆರಳಿದ ಸಂದರ್ಭ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರು ಕೂಡ ಸಂಗಾತಿ, ಕುಟುಂಬ, ಮಕ್ಕಳು, ಊರನ್ನು ತೊರೆದು ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂದರನಗರಕ್ಕೆ ಓಡಿ ಬಂದಿದ್ದಾರೆ. ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಂದು ತಿಂಗಳ ಕಾಲ ದಾಂಪತ್ಯ ನಡೆಸಿದ್ದಾರೆ.
ಸೋಮವಾರ ಸಂಜೆ ವಿಶ್ವನಾಥನ ಕಾರಿನಲ್ಲಿ ಮನೆಯಿಂದ ಹೊರಟ ಇಬ್ಬರೂ ಹೆಬ್ಬಾಲೆ ಬಳಿ ಕಾರಿನಲ್ಲಿಯೇ ವಿಷ ಸೇವಿಸಿದ್ದಾರೆ. ಬಳಿಕ ವಿಶ್ವನಾಥ್ ಹೆಬ್ಬಾಲೆಯ ಸ್ನೇಹಿತನೊಬ್ಬನಿಗೆ ಫೋನಾಯಿಸಿ ತಾವು ವಿಷ ಸೇವಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಆತನ ಸ್ನೇಹಿತ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಕೂಡಾ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ವಿದ್ಯಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರೆ ವಿಶ್ವನಾಥನ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!