Sunday, June 26, 2022

Latest Posts

ಪೋಲೆಂಡ್ ಓಪನ್ ಕುಸ್ತಿ ಟೂರ್ನಿ: ಫೈನಲ್‌ಗೆ ವಿನೇಶಾ ಪೋಗಟ್‌

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯಲ್ಲಿ ಭಾರತದ ವಿನೇಶಾ ಪೋಗಟ್ ಅವರು ಫೈನಲ್ ತಲುಪಿದ್ದಾರೆ.
ಮಹಿಳೆಯರ 53 ಕೆಜಿ ವಿಭಾಗದಲ್ಲಿ ಶುಕ್ರವಾರ ಅವರು ಚಿನ್ನದ ಪದಕದ ಸುತ್ತಿಗೆ ಪ್ರವೇಶಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಮೊದಲ ಬೌಟ್‌ನಲ್ಲಿ ವಿನೇಶಾ, ರಷ್ಯಾದ ಏಕಟೆರಿನಾ ಪೊಲೆಶ್ಚುಕ್ ಅವರನ್ನು 6-2ರಿಂದ ಮಣಿಸಿದರು. ಬಳಿಕ ಅಮೆರಿಕದ ಆಯಮಿ ಆಯನ್ ಫರ್ನ್‌ಸೈಡ್‌ ಎದುರು ಸುಲಭ ಜಯ ಸಂಪಾದಿಸಿದರು.
ಫೈನಲ್ ತಲುಪುವುದರೊಂದಿಗೆ 26 ವರ್ಷದ ವಿನೇಶಾ, ಈ ಋತುವಿನಲ್ಲಿ ಮೂರನೇ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. ಮಾರ್ಚ್‌ನಲ್ಲಿ ನಡೆದ ಮಟ್ಟೆಯೊ ಪೆಲಿಕೊನ್ ಹಾಗೂ ಏಪ್ರಿಲ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಅಗ್ರಸ್ಥಾನ ಗಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss