spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೋಹತ್ಯೆ ನಡೆದರೆ ಪೊಲೀಸರೇ ಹೊಣೆ: ಗೃಹ ಸಚಿವರ ಎಚ್ಚರಿಕೆ

- Advertisement -Nitte

ಹೊಸ ದಿಗಂತ ವರದಿ, ಶಿವಮೊಗ್ಗ:

ಸರ್ಕಾರ ಗೋಹತ್ಯೆ ನಿಷೇಧಕ್ಕೆ ಬಿಗಿ ಕಾನೂನು ರೂಪಿಸಿ ಪೊಲೀಸರ ಕೈಗೆ ಕೊಟ್ಟಿದೆ. ಆದರೂ ಅಕ್ರಮ ಗೋಸಾಗಣೆ, ಗೋಹತ್ಯೆ ಕಡಿಮೆಯಾಗುತ್ತಿಲ್ಲ. ಇನ್ನು ಮುಂದೆ ಸ್ಥಳೀಯ ಪೊಲೀಸರನ್ನೇ ಹೊಣೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ
ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡುವ ಸಂಬಂಧ ಗೋ ಸಂರಕ್ಷಣೆ ಮಾಡಬೇಕು. ಇದಕ್ಕೆ ಅಕ್ರಮ ಗೋಸಾಗಣೆ ಹಾಗೂ ಗೋಹತ್ಯೆ ತಡೆಯಲೇ ಬೇಕಿದೆ ಎಂದರು.
ಡಿ.1ರಂದು ಅವರದೇ ಕ್ಷೇತ್ರದಲ್ಲಿ ಗೋಸಾಗಣೆ ಮಾಡುವವರನ್ನು ತಡೆಯಲು ಮುಂದಾದವರ ಮೇಲೆ ವಾಹನ ಹತ್ತಿಸಿ ಹತ್ಯೆಗೈಯಲು ಮುಂದಾಗಿದ್ದ ಘಟನೆ ನಡೆದಿತ್ತು. ಇಬ್ಬರು ಯುವಕರು ಸಾವಿನ ದವಡೆಯಿಂದ ಪಾರಾಗಿದ್ದರು. ಇದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss