ಜೆಇಎಂ ಉಗ್ರ ಸಂಘಟನೆಯ ಶಂಕಿತ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿಯಾಗಿ ಸೋಪೋರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ (ಜೆಇಎಂ) ಗುಂಪಿಗೆ ಸೇರಿದ ಸಹಚರನೊಬ್ಬನನ್ನು ಸೆರೆ ಹಿಡಿದಿದ್ದಾರೆ.

ಭದ್ರತಾ ಪಡೆಗಳು ಆತನಿಂದ ನಿಷೇಧಿತ ಸಾಮಗ್ರಿಗಳು ಸೇರಿ ಒಂದು ಕೈ ಗ್ರೆನೇಡ್ ವಶಕ್ಕೆ ಪಡೆದುಕೊಂಡಿವೆ. ಬಂಧಿತ ಶಂಕಿತ ಉಗ್ರನನ್ನು ವಗೂಬ್ ಹೈಗಂ ನಿವಾಸಿ ಅಬ್ ರಶೀದ್ ವಾನಿಯ ಪುತ್ರ ಫಾರೂಕ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ.

ಟಾರ್ಜೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ಭಾರತೀಯ ಸೇನಾ ಪಡೆಯ ಶೋಧ ಕಾರ್ಯಾಚರಣೆ ವೇಳೆ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ಪೊಲೀಸರು ಹಾಗೂ ಸೇನೆ ಕೈಗೊಂಡ ಪ್ರಾಥಮಿಕ ತನಿಖೆ ನಂತರ ಆರೋಪಿ ಜೆಎಂಗೆ ಭಯೋತ್ಪಾದಕ ಸಹಚರನಾಗಿ ಕೆಲಸ ಮಾಡುತ್ತಿರುವುದು ಬಯಲಿಗೆ ಬಂದಿದೆ.

ಜೈಶ್-ಎ-ಮೊಹಮ್ಮದ್ (ಜೆಇಎಂ) ಗುಂಪಿನ ಜೊತೆ ಸೇರಿ ಶಂಕಿತ ಉಗ್ರ ಇತರ ರಾಜ್ಯಗಳ ನೌಕರರು ಸೇರಿದಂತೆ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದನು ಎಂದು ತಾರ್ಜೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!