spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಕ್ಕಳ ಮಾರಾಟ ಜಾಲ ಭೇದಿಸಿದ ಪೊಲೀಸರು, ತಾಯಿ-ಮಗಳ ಬಂಧನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು:

ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ತಾಯಿ, ಮಗಳನ್ನು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಶ್ರೀಮತಿ ಅಲಿಯಾಸ್ ಸರಸ್ವತಿ, ಮಗಳು ಲಕ್ಷಿ÷್ಮ ಬಂಧಿತ ಆರೋಪಿಗಳು.
ನಂಜನಗೂಡು ಪಟ್ಟಣದ ತ್ಯಾಗರಾಜ ಕಾಲೋನಿಯ ನಿವಾಸಿಯಾದ ದಿವಂಗತ ಮಹದೇವ ಎಂಬುವರ ಎರಡನೇ ಪತ್ನಿ ಜ್ಯೋತಿ ಎಂಬಾಕೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗವೊಂದು ಜನಿಸಿತ್ತು. ಆ ವೇಳೆಯಲ್ಲಿ ಜ್ಯೋತಿ ಜೊತೆಗಿದ್ದ ಪ್ರಕರಣದ ಪ್ರಮುಖ ಆರೋಪಿಯಾದ ಶ್ರೀಮತಿ ನಾನೇ ಮಗುವನ್ನು ಆರೈಕೆ ಮಾಡುತ್ತೇನೆಂದು ಜ್ಯೋತಿಯಿಂದ
ಮಗುವನ್ನು ಪಡೆದುಕೊಂಡು, ಬಳಿಕ ಆಕೆಯನ್ನು ಮನೆಗೆ ಕರೆತಂದು ಬಿಟ್ಟಿದ್ದಳು. ಇದಾದ 25 ದಿನಗಳ ಬಳಿಕ ಜ್ಯೋತಿ ಭವಿಷ್ಯದಲ್ಲಿ ಗಂಡು ಮಗು ನನಗೆ ಆಸರೆಯಾಗುತ್ತದೆ ಎಂದು ಭಾವಿಸಿ, ತನ್ನ ಮಗುವನ್ನು ತಂದು ಕೊಡುವಂತೆ ಶ್ರೀಮತಿಗೆ ದುಂಬಾಲು ಬಿದ್ದು, ಗಲಾಟೆ ಮಾಡಿದ್ದಳು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಅವರು ಜ್ಯೋತಿಯನ್ನು ಭೇಟಿಯಾಗಿ, ಹುಟ್ಟಿದ ಗಂಡು ಮಗುವಿನ ಬಗ್ಗೆ ಮಾಹಿತಿ ಕೇಳಿದಾಗ, ಆ ಮಗು ಸತ್ತು ಹೋಯಿತ್ತೆಂದು ತಿಳಿಸಿದ್ದಳು. ಇದರಿಂದಾಗಿ ಕಾನೂನು ಬಾಹಿರವಾಗಿ ಮಗು ದತ್ತು ಪ್ರಕ್ರಿಯೆ ನಡೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶಶಿಕಲಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಠಾಣೆಯ ಪೊಲೀಸರು, ತನಿಖೆ ನಡೆಸಿದಾಗ, ಮಗು ಮಾರಾಟ ಜಾಲ ಸಕ್ರೀಯವಾಗಿ ನಡೆಯುತ್ತಿರುವುದು ಕಂಡು ಬಂದಿತು. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರು, ಮಗು ಮಾರಾಟ ಜಾಲವನ್ನು ಭೇದಿಸಲೆಂದು ಎಎಸ್ಪಿ ಶಿವಕುಮಾರ್, ನಂಜನಗೂಡು ಡಿಎಸ್‌ಪಿ ಗೋವಿಂದ ರಾಜು ಮಾರ್ಗದರ್ಶನದಲ್ಲಿ ನಂಜನಗೂಡು ಸಿಪಿಐ ಲಕ್ಷಿö್ಮÃಕಾಂತ್ ತಳವಾರ ನೇತೃತ್ವದಲ್ಲಿ ವಿಶೇಷ ತಂಡವೊAದನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ಈ ತಂಡ ಮಕ್ಕಳ ಮಾರಾಟ ಜಾಲದ ಪ್ರಮುಖ ಆರೋಪಿಗಳಾದ ನಂಜನಗೂಡು ಪಟ್ಟಣದ ಶ್ರೀಮತಿ ಅಲಿಯಾಸ್ ಸರಸ್ವತಿ, ಮಗಳು ಲಕ್ಷಿ÷್ಮ ಎಂಬುವರನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿದಾಗ, ಪೋಷಕರ ಬಡತನವನ್ನು ದುರುಪಯೋಗಪಡಿಸಿಕೊಂಡು, ಅವರನ್ನು ಪುಸಲಾಯಿಸಿ, ಮಗು ಪಡೆದು, ಅವುಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದ ಬಗ್ಗೆ ಬಾಯಿ ಬಿಟ್ಟರು. ಬಂಧಿತರಿAದ ಎರಡು ಮಕ್ಕಳ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್,
ಮಗು ಹಾರೈಕೆ ಕೇಂದ್ರ ತೆರೆದು ಮಕ್ಕಳು ಪೋಷಕರುನ್ನ ಗುರುತಿಸುತ್ತಿದ್ದ ಆರೋಪಿ ತಾಯಿ-ಮಗಳು, ಮಗು ಪಡೆಯಬೇಕೆನ್ನುವ ಬಾಣಂತಿಯರಿಗೆ ತಾವೇ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸುತ್ತಿದ್ದರು. ನಂಜನಗೂಡಿನ ಜ್ಯೋತಿ ಹಾಗೂ ಕೊಳ್ಳೇಗಾಲ ಮೂಲದ ಒಂದು ಮಗು ಮಾರಾಟದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮತ್ತೊಂದು ಮಗುವಿನ ಮಾರಾಟದ ಸುಳಿವು ಸಿಕ್ಕಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಇತ್ತೀಚೆಗೆ ಮಗುವೊಂದು ಮಾರಾಟವಾಗಿತ್ತು. ಜ್ಯೋತಿ ಎಂಬ ಮಹಿಳೆ ಇತ್ತೀಚೆಗೆ ಮೂರು ತಿಂಗಳ ಮಗುವನ್ನು ಶ್ರೀಮತಿಗೆ ನೀಡಿದ್ದಳು. ಆರಂಭದಲ್ಲಿ ಈ ಪ್ರಕರಣದಲ್ಲಿ ಆರ್ಥಿಕ ವಹಿವಾಟು ನಡೆದಿಲ್ಲ ಎನ್ನಲಾಗಿತ್ತು. ಆದರೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ, ಆರೋಪಿ ಶ್ರೀಮತಿ ಹೊಳೆನರಸೀಪುರ ಮೂಲದ ದಂಪತಿಗೆ ಮಗು ಮಾರಾಟ ಮಾಡಿ, ಅವರಿಂದ 3 ಲಕ್ಷ ರೂ ಹಣ ಪಡೆದುಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ.
ಈಕೆಯ ಮೂಲಕವೇ ಮತ್ತಷ್ಟು ಮಕ್ಕಳ ಮಾರಾಟವಾಗಿರುವ ಬಗ್ಗೆಯೂ ಶಂಕೆ ಮೂಡಿತ್ತು. ಮಕ್ಕಳ ಮಾರಾಟ ಜಾಲ ಭೇದಿಸಲು ಪೊಲೀಸರು ತೀವ್ರವಾದ ತನಿಖೆ ಮಾಡುತ್ತಿದ್ದರು. ಇದೀಗ ಮತ್ತೊಂದು ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.
ಮAಜುಳ ಎಂಬಾಕೆಗೆ ಜನಿಸಿದ ಹೆಣ್ನು ಮಗುವನ್ನು ಪಡೆದು ಕೊಳ್ಳೇಗಾಲ ಪಟ್ಟಣದ ಚೈತ್ರ –ಉಮೇಶ್ ಎಂಬ ದಂಪತಿಗೆ ಮಾರಾಟ ಮಾಡಿರುವುದು ತನಿಖೆಯಿಂದ ಕಂಡು ಬಂದಿದೆ. ಇದೀಗ ಆರೋಪಿಗಳಾದ ಶ್ರೀಮತಿ ಹಾಗೂ ಲಕ್ಷಿ÷್ಮಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಈಗಾಗಲೇ ಮಕ್ಕಳ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ನಿರ್ಗತಿಕರು, ವಿಧವೆಯರ ಮಕ್ಕಳನ್ನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಮಕ್ಕಳಿಲ್ಲದ ದಂಪತಿಗೆ ಕಾನೂನುಬಾಹಿರವಾಗಿ ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಹಣ ಗಳಿಕೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಕಾನೂನಿಗೆ ವಿರುದ್ಧವಾಗಿ ಮಕ್ಕಳನ್ನು ಮಾರಾಟ ಮಾಡಿರುವವರು, ಮಧ್ಯವರ್ತಿಗಳು ಹಾಗೂ ಮಕ್ಕಳನ್ನು ಕೊಂಡುಕೊAಡಿರುವವರು ತಪ್ಪಿತಸ್ಥರಾಗುತ್ತಾರೆ. ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss