spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಆರು ಗೋವುಗಳ ರಕ್ಷಣೆ, ಓರ್ವನ ಬಂಧನ

- Advertisement -Nitte

ಹೊಸ ದಿಗಂತ ವರದಿ, ತುಮಕೂರು:

ಅಕ್ರಮ ಕಸಾಯಿಖಾನೆ ಮೇಲೆ ಬಜರಂಗದಳದ ಮಾಹಿತಿ ಮೇರೆಗೆ ತಿಲಕ್ ಪಾರ್ಕ್ ಪೊಲೀಸರು ದಾಳಿ ಮಾಡಿದ್ದಾರೆ.

ಅಕ್ರಮವಾಗಿ ಕಟಾವು ಮಾಡಲು ಇರಿಸಿದ್ದ 6 ಗೋವುಗಳನ್ನು ರಕ್ಷಿಸಿದ್ದು,  ಕಟಾವು ಮಾಡಿದ್ದ ಗೋವುಗಳ ಮಾಂಸ ವಶಕ್ಕೆ ಪಡೆದು ಒಬ್ಬನ ಬಂಧಿಸಿಲಾಗಿದೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಮಂಜುಭಾರ್ಗವ್ ತಿಳಿಸಿದ್ದಾರೆ.

ನವೆಂಬರ್ 25 ರಂದು 6 ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಯಲ್ಲಿ ಇರಿಸಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ, ತಿಲಕ್ ಪಾರ್ಕ್ ಪೊಲೀಸರಿಗೆ ದೂರು ನೀಡಿ ಪೊಲೀಸರ ನೇತೃತ್ವದಲ್ಲಿ ದಾಳಿ ನೆಡೆಸಿದೆ.

ರಕ್ಷಣೆ ಮಾಡಲಾದ 6 ಗೋವುಗಳನ್ನು ಗೋ ಶಾಲೆಗೆ ರವಾನಿಸಲಾಗಿದೆ, ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದಿದ್ದ ಗೋ ಮಾಂಸವನ್ನು ನಾಶ ಪಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ 25-30 ಜನರ ಗೋ ಕಳ್ಳರ ತಂಡವು  ಬಜರಂಗದಳದ ಕಾರ್ಯಕರ್ತರನ್ನು ಕೊಲೆ ಮಾಡಲು ಯತ್ನಿಸಿದ್ದು, ಈ ತಂಡದ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿಲಾಗಿದೆ. 6ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರು ಸಹ ಅಕ್ರಮ ಕಸಾಯಿಖಾನೆಗಳ ವಿರುದ್ದ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಗೋ ಹತ್ಯೆ ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಬಜರಂಗದಳದ ಕಾನೂನಾತ್ಮಕ ಹೋರಾಟನಿಲ್ಲದು ಎಂದು ಅವರು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss