Wednesday, August 10, 2022

Latest Posts

ಪರಪ್ಪನ ಅಗ್ರಹಾರದ ಮೇಲೆ ಪೊಲೀಸರ ದಾಳಿ: ವಿವರಣೆ ನೀಡಿದ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರು ನಗರದ 8 ವಿಭಾಗಗಳು ಮತ್ತು ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದು, ಈ ಕುರಿತು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಮಾಹಿತಿ ನೀಡಿದ್ದಾರೆ.
1,548 ರೌಡಿಗಳು ಇಂದು ನಮಗೆ ಸಿಕ್ಕಿದ್ದಾರೆ. ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ನಮ್ಮ ಪೊಲೀಸರು ರೌಡಿಗಳು ವಾಸವಾಗಿದ್ದ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ಕೆಲವರ ಮನೆಯಲ್ಲಿ ಚಾಕು, ಲಾಂಗ್‌ ಸೇರಿದಂತೆ ಮಾರಕಾಸ್ತ್ರಗಳು ಸಿಕ್ಕಿವೆ. ಮತ್ತಷ್ಟು ಕಡೆ ಗಾಂಜಾ ಪತ್ತೆಯಾಗಿದೆ ಎಂದು ಹೇಳಿದರು.
ಕೆಲ ರೌಡಿಗಳ ಮನೆಗಳಲ್ಲಿ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಜೈಲಿನಲ್ಲಿ 200 ಗ್ರಾಂ ಗಾಂಜಾ, ಸಿಮ್‌ ಕಾರ್ಡ್‌, ಮೆಮೋರಿ ಕಾರ್ಡ್‌, ಪೆನ್‌ಡ್ರೈವ್‌ ದೊರೆಕಿವೆ. 409 ರೌಡಿಗಳ ವಿರುದ್ಧ ಮುಂಜಾಗ್ರತವಾಗಿ ಕ್ರಮಕೈಗೊಳ್ಳಲಾಗಿದೆ ಎಂದರು.
ಇನ್ನು ಆಯುಧ ಕಾಯ್ದೆಯಡಿ 48, ಎನ್‌ಡಿಪಿಎಸ್‌ ಅಡಿಯಲ್ಲಿ 84 ಹಾಗೂ ದರೋಡೆಗೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿವೆ. ಒಟ್ಟು 561 ರೌಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.
ದಾಳಿಯಲ್ಲಿ ಪೊಲೀಸ್‌ ಅಧಿಕಾರಿಗಳಾದ ಮುರುಗನ್, ಸಂದೀಪ್ ಪಾಟೀಲ್, 8 ಡಿಸಿಪಿಗಳು, ಕ್ರೈಂ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕಪಡಿಸಿದರು.
ಕೇಂದ್ರ ಕಾರಾಗೃಹದಲ್ಲಿರುವ ರೌಡಿಗಳಾದ ಕುಣಿಗಲ್ ಗಿರಿ, ಉಳ್ಳಾಲ ಕಾರ್ತಿಕ್, ಕುಳ್ಳ ರಿಜ್ವಾನ್, ಬಾಂಬೆ ಸಲೀಂ, ಆಟೋ ರಾಮ ಇದ್ದ ಸೆಲ್‌ಗಳಲ್ಲಿ ಶೋಧನೆ ಮಾಡಲಾಗಿದೆ ಎಂದು ಹೇಳಿದರು.
ಜೈಲಿನಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಕಾರಾಗೃಹ ಎಡಿಜಿಪಿಗೆ ಮಾಹಿತಿ, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಜೈಲಿನಲ್ಲಿ ಕುಳಿತು ರೌಡಿಗಳ ಹತ್ಯೆಗೆ ಪ್ಲಾನ್‌ಗಳು ನಡೆಯುತ್ತಿವೆ. ಇದರ ಬಗ್ಗೆ ಸಹ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss