ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿ ಗೋಕಳ್ಳರನ್ನು ಸೆರೆಹಿಡಿದ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹರಿಯಾಣದ ಸೋಹ್ನಾದಲ್ಲಿ ಜಾನುವಾರುಗಳ ಕಳ್ಳಸಾಗಣೆ ಮಾಡುತ್ತಿದ್ದ 5 ಜನರನ್ನು ಗುರುಗ್ರಾಮ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡುವ ಮೂಲಕ ಗೋಕಳ್ಳರನ್ನು ಹಿಡಿದ್ದು, ಲಾಕ್ ಅಪ್ ಹಿಂದೆ ಹಾಕಿದ್ದಾರೆ.
ಮುಂಜಾನೆ 3 ಗಂಟೆ ವೇಳೆ , ಕೆಲವು ಜಾನುವಾರು ಕಳ್ಳಸಾಗಣೆದಾರರು ಮಿನಿಟ್ರಕ್​ ನಲ್ಲಿ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವುದು ಮಾಹಿತಿ ಬಜರಂಗದಳದ ಕಾರ್ಯಕರ್ತರಿಗೆ ಸಿಕ್ಕಿದ್ದು, ತಡೆಯಲು ಯತ್ನಿಸಿದಾಗ ಬಜರಂಗದಳದ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದ್ದರು, ನಂತರ ಬಜರಂಗದಳದವರ ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರುಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾಹ್ಯಾ, ಬಲ್ಲು, ತಸ್ಲೀಮ್, ಖಾಲಿದ್ ಮತ್ತು ಸಾಹಿದ್ ಬಂಧಿತ ಐವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಸಿನಿಮೀಯ ರೀತಿಯಲ್ಲಿ ಚೇಸಿಂಗ್:

ಬಜರಂಗದಳವರು ಗುರುಗ್ರಾಮ್ ಪೋಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾ ಭೋಂಡ್ಸಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ತಡೆಯಲು ಬ್ಯಾಟಿಕೇಡ್​ ಗಳನ್ನು ಹಾಕಿದ್ದರು. ಆದರೆ ಇದನ್ನು ಕಂಡ ಆರೋಪಿಗಳು ಫ್ಲೈಓವರ್‌ ಮೇಲೆ ಟ್ರಕ್‌ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದು, 5 ಮಂದಿಯನ್ನು ಬಂಧಿಸಿ ಓರ್ವ ಪರಾರಿಯಾಗಿದ್ದಾನೆ.
ಇಬ್ಬರು ಕಳ್ಳಸಾಗಣೆದಾರರು ಪರಾರಿಯಾಗುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅವರಲ್ಲಿ ನಾಲ್ವರು ಓಡಿಹೋಗಲು ಸೇತುವೆಯಿಂದ ಜಿಗಿದಿದ್ದರು ಮತ್ತು ಅವರಲ್ಲಿ ಒಬ್ಬನಾದ ಶಾಹಿದ್ ವಾಹನದಿಂದ ಜಿಗಿಯುತ್ತಿದ್ದಂತೆ ಟ್ರಕ್‌ಗೆ ಡಿಕ್ಕಿ ಹೊಡೆದನು. ವೇಗವಾಗಿ ಬಂದ ಲಾರಿಯಿಂದ ಎಸೆದ ಪರಿಣಾಮ ಎರಡು ಹಸುಗಳಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಗೋಕುಲಧಾಮ, ಜಜ್ಜರ್‌ಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!