Wednesday, August 10, 2022

Latest Posts

11 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ ‘ಶ್ವಾನ’ಕ್ಕೂ ಹೃದಯಪೂರ್ವಕ ಬೀಳ್ಕೊಡುಗೆ ಕೊಟ್ಟ ಪೊಲೀಸ್ ಇಲಾಖೆ: ಇಲ್ಲಿದೆ ವೈರಲ್ ವಿಡಿಯೋ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪೊಲೀಸರಿಗೂ ತಿಳಿಯದ ಎಷ್ಟೋ ಸಾಕ್ಷ್ಯಾಧಾರಗಳನ್ನು ವಾಸನೆ ಮೂಲಕವೇ ಹುಡುಕಿ ತೆಗೆದು,  ಎಷ್ಟೋ ಅಪರಾಧಗಳನ್ನು ಬಯಲಿಗೆಳೆಯುವಲ್ಲಿ ಶ್ವಾನದಳವನ್ನು ಮೀರಿಸುವವರು ಯಾರೂ ಇಲ್ಲ.

ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ನೀಡುವಂತ ಹೃದಯಪೂರ್ವಕ ಬೀಳ್ಕೊಡುಗೆಯನ್ನು ಶ್ವಾನದಳಕ್ಕೂ ನೀಡುತ್ತಾರೆ.

ಹೌದು… ಇಂತಹದೇ ಒಂದು ಆತ್ಮೀಯ ಬೀಳ್ಕೊಡುಗೆಯನ್ನು ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ನಾಯಿ ಪಡೆದುಕೊಂಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಿ. ಸ್ಪೈಕ್ ಅನ್ನು  ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದು ಚಪ್ಪಾಳೆ ತಟ್ಟುವ ಮೂಲಕ ಅದನ್ನು ಬೀಳ್ಕೊಟ್ಟಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಸ್ಪೈಕ್’ನ ಇಷ್ಟು ದಿನದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.

ಗೋಲ್ಡನ್ ಲ್ಯಾಬ್ರಡಾರ್ ತಳಿಗೆ ಸೇರಿದ ಸ್ಪೈಕ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಇದು ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಅತ್ಯಂತ ಪರಿಣತಿಯನ್ನು ಹೊಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss