Thursday, July 7, 2022

Latest Posts

ಜಮ್ಮುವಿನಲ್ಲಿ ಸಂಶಯಾತ್ಮಕ ಡ್ರೋನ್ ಹೊಡೆದುರುಳಿಸಿದ ಪೊಲೀಸರು: 5 ಕೆ.ಜಿ. ಎಲ್ ಇಡಿ ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು ಜಿಲ್ಲೆಯ ಅಕ್ನೂರ್ ಪ್ರದೇಶದಲ್ಲಿ ಸಂಶಯಾತ್ಮಕವಾಗಿ ಹಾರಾಟ ನಡೆಸುತ್ತಿದ್ದ ಹೆಕ್ಸಾಕಾಪ್ಟರ್ ಡ್ರೋನ್ ಒಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ.

ಡ್ರೋನ್ ಅಂತಾರಾಷ್ಟ್ರೀಯ ಗಡಿಗಳ ಒಳಗೆ 8 ಕಿ.ಮೀ. ನಲ್ಲಿ ಹೊಡೆದುರುಳಿಸಲಾಗಿದೆ. ಈ ಡ್ರೋನ್ ನಲ್ಲಿ 5 ಕೆಜಿ ಸುಧಾರಿತ ಎಲ್ ಇಡಿ ಸ್ಫೋಟಕಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ (ಎಲ್ ಇಟಿ)  ಕೈವಾಡ ಇದೆಯೇ ಮತ್ತು ಭಯೋತ್ಪಾದಕ ದಾಳಿಗೆ ಸಂಚನ್ನು ರೂಪಿಸುತ್ತಿದೆಯೇ ಎಂದು ಏಜೆನ್ಸಿಗಳು ತನಿಖೆ ಮಾಡುತ್ತಿವೆ.

ಈ ಹಿಂದೆಯೂ ಹಲವು ಬಾರಿ ಜಮ್ಮು ಕಾಶ್ಮೀರ ಗಡಿಯಲ್ಲಿ ಡ್ರೋನ್ ಗಳು ಪತ್ತೆಯಾಗಿದ್ದವು. ಕಳೆದ ಒಂದು ತಿಂಗಳಲ್ಲಿ ಜಮ್ಮುವಿನ ಅನೇಕ ಸ್ಥಳಗಳಲ್ಲಿ ಹಲವಾರು ಡ್ರೋನ್ ಗಳು ಕಂಡುಬಂದಿದ್ದು, ಡ್ರೋನ್ ದಾಳಿಯ ಬೆದರಿಕೆಯನ್ನು ಹೆಚ್ಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss