ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರಸಾಯನಿ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತವಾಗಿದೆ. ಕೊಠಡಿಗಳು ಸೇರಿದಂತೆ ಇಡೀ ಪೊಲೀಸ್ ಠಾಣೆ ಆವರಣ ಜಲಾವೃತಗೊಂಡಿದ್ದು, ಪೊಲೀಸರು ಒಂದು ಅಡಿಗೂ ಹೆಚ್ಚು ನೀರಿನಲ್ಲಿ ಅಲೆದಾಡಬೇಕಾಯಿತು. ಮಳೆ ನೀರಿನಿಂದಾಗಿ ಕೆಲಸ-ಕಾರ್ಯಗಳಿಗೆ ಅಡ್ಡಯಾಗಿದ್ದು, ಪೊಲೀಸರೂ ಪರದಾಡುವ ಸ್ಥಿತಿ ಬಂದೊದಗಿದೆ.
ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೋಮನಾಥ ಘರ್ಗೆ ಮಾತನಾಡಿ, ನಗರದಲ್ಲಿ ಭಾರೀ ಮಳೆಯಿಂದಾಗಿ ರಸಾಯನಿ ಠಾಣೆ ಜಲಾವೃತವಾಗಿದೆ. ಭಾರೀ ಮಳೆಯ ನಂತರ ನದಿ ದಡದ ಗ್ರಾಮವೂ ಜಲಾವೃತಗೊಂಡಿದ್ದು, ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.
ಇಂದು ಮುಂಜಾನೆ, ಮುಂಬೈ, ಥಾಣೆ, ಪಾಲ್ಘರ್, ರಾಯಗಡ್ ಮತ್ತು ರತ್ನಗಿರಿಯಲ್ಲಿ ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ನಿನ್ನೆ, ಭಾರತೀಯ ಹವಾಮಾನ ಇಲಾಖೆ (IMD) ಪಾಲ್ಘರ್, ಮತ್ತು ರಾಯಗಢ ಜಿಲ್ಲೆಗಳಿಗೆ ‘ರೆಡ್’ ಅಲರ್ಟ್ ಮತ್ತು ಥಾಣೆ, ಮುಂಬೈ ಮತ್ತು ರತ್ನಗಿರಿಗೆ ‘ಆರೆಂಜ್’ ಅಲರ್ಟ್ ಘೋಷಿಸಿತ್ತು.