ರಂಗು-ರಂಗಿನ ಹಬ್ಬ: ಮೋದಿ, ಅಮಿತ್‌ ಶಾ, ರಾಹುಲ್‌ ಗಾಂಧಿ ಸೇರಿದಂತೆ ರಾಜಕೀಯ ಗಣ್ಯರ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಂಗಿನ ಹಬ್ಬ ಹೋಳಿಯನ್ನು ದೇಶದಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಯುವಕರು, ಪುಟ್ಟ ಮಕ್ಕಳು ಬಣ್ಣಗಳ ಮೋಜಿನಲ್ಲಿ ಮುಳುಗಿದ್ದಾರೆ. ಹೋಳಿ ಹಬ್ಬದ ನಿಮಿತ್ತ ಹಲವು ರಾಜಕೀಯ ಮುಖಂಡರು ನಾಡಿನ ಜನತೆಗೆ ಹೋಳಿ ಶುಭಾಶಯ ಕೋರಿದರು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.

ʻಹೋಳಿ ಹಬ್ಬದ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹದ ಬಣ್ಣಗಳು ಯಾವಾಗಲೂ ಸುರಿಯಲಿʼ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

 

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೇಶದ ಜನತೆಗೆ ಹೋಳಿ ಶುಭಾಶಯ ಕೋರಿದ್ದಾರೆ. ಸಂತೋಷ ಮತ್ತು ಉಲ್ಲಾಸದ ಹಬ್ಬವಾದ ಹೋಳಿ ಹಬ್ಬದ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಹಬ್ಬ ಎಲ್ಲರ ಬಾಳಿನಲ್ಲಿ ಹೊಸ ಚೈತನ್ಯ ತುಂಬಲಿ ಎಂದು ಶುಭ ಹಾರೈಸಿದರು.

 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ದೇಶದ ಜನತೆಗೆ ಹೋಳಿ ಶುಭಾಶಯ ಕೋರಿದ್ದಾರೆ. ಹೋಳಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಬಣ್ಣಗಳನ್ನು ತುಂಬುತ್ತದೆ ಮತ್ತು ದೇಶದಲ್ಲಿ ಏಕತೆಯ ಬಣ್ಣವನ್ನು ಬೆಳಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

 

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದದು, ಈ ಹಬ್ಬವು ಸಂತೋಷ, ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಹೋಳಿಯು ನಿಮ್ಮ ಜೀವನವನ್ನು ಸಂತೋಷಮಯವಾಗಿರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!