Wednesday, August 10, 2022

Latest Posts

ಬೆಮೆಲ್ ವಿಚಾರದಲ್ಲಿ ಕೆಲವರಿಂದ ರಾಜಕಾರಣ: ಸಂಸದ ಮುನಿಸ್ವಾಮಿ ಟೀಕೆ

ಹೊಸದಿಗಂತ ವರದಿ,ಕೋಲಾರ:

ಬೆಮೆಲ್ ವಿಚಾರದಲ್ಲಿ ರಾಜಕೀಯ ಮಾಡಕ್ಕೆ ಸಿದ್ದರಿಲ್ಲ. ಬೇಕಂತಲೆ ಕೆಲವರು ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಹೇಳಿಕೆ ಮಾಡುತ್ತಿದ್ದಾರೆ. ಬೆಮೆಲ್ ಕಾರ್ಮಿಕರ ಪರವಾಗಿಯೇ ಸರ್ಕಾರ ಇದೆ, ಇದುವರೆಗೂ ಯಾವುದೇ ರೀತಿ ತೊಂದರೆಯಾಗಿಲ್ಲ. ಕಾರ್ಮಿಕರು ಪ್ರತಿಭಟನೆ ಕೈ ಬಿಟ್ಟು ಮಾತುಕತೆಗೆ ಬರಲಿ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೆಲವರು ಕಾರ್ಮಿಕರನ್ನು ಎತ್ತಿಕಟ್ಟಿ ರಾಜಕಾರಣ ಮಾಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯ ಜನರಿಗೆ ತೊಂದರೆ ಮಾಡಬೇಕು ಎಂಬುದು ನಮ್ಮ ಮನಸ್ಸಿನಲ್ಲಿ ಇಲ್ಲ. ಒಳ್ಳೆಯದು ಆಗಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ಸಚಿವರನ್ನು ಹಾಗೂ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಯಿಸಿ ಬಿಜಿಎಂಎಲ್ ಸ್ಥಳ ಪರಿಶೀಲನೆ ನಡೆಸಲಾಗಿದೆ. ೩,೨೦೦ ಎಕರೆ ಜಾವನ್ನು ಕೈಗಾರಿಕೆ ಪ್ರದೇಶ ಮಾಡಲು ಒತ್ತಾಯ ಮಾಡಿದ್ದೇವೆ. ಈಗಾಗಲೇ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ ಎಂದರು.
ಹಿಂದೆ ಕಾರ್ಮಿಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೈಗಾರಿಕೆ ಸಚಿವರನ್ನು ಭೇಟಿ ಮಾಡಿಸಲಾಗಿತ್ತು. ಆಗ ಕಾರ್ಮಿಕರು ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ. ಕಾರ್ಮಿಕರು ಕಾರ್ಖಾನೆಯಲ್ಲಿ ಯಾವ ಲೆಕ್ಕಾಚಾರದಲ್ಲಿ ಕೆಲಸ ಮಾಡಬೇಕು. ೮ ತಾಸಿಗೂ ಅಧಿಕ ಕೆಲಸ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಗುಣಮಟ್ಟದ ಯಂತ್ರ ತಯಾರಿಕೆಗೆ ಕ್ರಮಕೈಗೊಳ್ಳಲಾಗಿದೆ. ತೊಂದರೆ ಮಾಡುವುದು ಸರ್ಕಾರದ ಉದ್ದೇವಲ್ಲ ಎಂದು ಸ್ಪಷ್ಟಪಡಿಸಿದರು.
ನಾನೀಗ ತಮಿಳುನಾಡು ರಾಜ್ಯದ ವೆಲ್ಲೂಪುರಂ ಜಿಲ್ಲೆಯ ಚುನಾವಣಾ ಉಸ್ತುವರಿಯನ್ನು ಪಕ್ಷ ವಹಿಸಿದೆ. ಆ ಕೆಲಸ ಮುಗಿಸಿಕೊಂಡು ಬಂದ ಮೇಲೆ ಕಾರ್ಮಿಕರು ಒಟ್ಟಿಗೆ ಬಂದರೆ ಸಚಿವರ ಭೇಟಿಗೆ ಅವಕಾಶ ಮಾಡಿಕೊಡುತ್ತೇನೆ. ನ್ಯಾಯಯುತ ಬೇಡಿಕೆಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಕಾರ್ಮಿಕರಿಗೆ ಯಾವುದೇ ತೊಂದರೆ ಎದುರಾಗಲು ಬಿಡುವುದಿಲ್ಲ ಎಂದರು.
ನಮಗೆ ಸುಳ್ಳು ಹೇಳಲು ಬರುವುದಿಲ್ಲ. ಈ ಹಿಂದೆ ಯಾವುದೇ ರೀತಿ ಪೂರ್ವ ತಯಾರಿ ಇಲ್ಲದೆ ಆಗ ಸರ್ಕಾರದಲ್ಲಿದ್ದ ಪಕ್ಷದವರು ತರಾತುರಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಶಂಕುಸ್ಥಾಪನೆ ಮಾಡಿದರು. ಆ ಸಮಯದಲ್ಲೇ ಚುನಾವಣೆ ಘೋಷಣೆಯಾದ ಕೂಡಲೇ ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ಕಾರುಗಳಲ್ಲಿ ಓಡಿ ಹೋಗಿರುವುದು ನಮಗೆ ನೆನಪಿದೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಎತ್ತಿಹೊಳೆ ನೀರಾವರಿ ಯೋಜನೆ ಜಾರಿಯಲ್ಲಿದೆ. ಮಂದಗತಿಯಲ್ಲಿ ಕಾಮಗಾರಿ  ನಡೆಯುತ್ತಿರುವುದರಿಂದ ವೇಗ ಹೆಚ್ಚಿಸಲು ಬಜೆಟ್‌ನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss