ಕುಮಾರಸ್ವಾಮಿಯವರಿಗೆ ರಾಜಕೀಯ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ: ಸಚಿವ ಅಶ್ವತ್ಥನಾರಾಯಣ

ಹೊಸ ದಿಗಂತ ವರದಿ, ಮಂಡ್ಯ :

ಕುಮಾರಸ್ವಾಮಿ ಅವರಿಗೆ ರಾಜಕೀಯ ಮಾಡುವುದೇ ಬದುಕು, ಇದನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ. ಇಂತಹವರಿಂದ ಸಮಾಜದ ಉದ್ಧಾರ ಹೇಗೆ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಾವು ಹಾಳಾಗುವುದಲ್ಲದೆ, ನಂಬಿದವರನ್ನೂ ಹಾಳು ಮಾಡಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಅವರು ಮಾಡಿರುವ ಅನ್ಯಾಯವೇ ಸಾಕ್ಷಿ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಯನ್ನು ನಡೆಸಲಾಗಲಿಲ ಎಂದರೆ ಏನನ್ನಬೇಕು. ಹೋಗಲಿ ನಾವೇ ಪುನಶ್ಚೇತನ ಮಾಡೋಣ ಎಂದರೂ ಅದಕ್ಕೂ ಅಡ್ಡಿಪಡಿಸುತ್ತಾರೆ. ಅವರಿಗೆ ರಾಜಕೀಯ ಮಾಡುವುದು ಬಿಟ್ಟರೇ ಬೇರೇನೂ ಗೊತ್ತಿಲ್ಲ ಎಂದು ಹರಿಹಾಯ್ದರು.
ಕಣ್ಣೀರಾಕುವುದು, ನಾಟಕ ಮಾಡುವುದು, ಮೋಸ ಮಾಡುವುದು, ಮೋಸ ಮಾಡುತ್ತಲೇ ರಾಜಕೀಯ ಮಾಡುವುದು ಇವಿಷ್ಟೇ ಅವರ ಬದುಕಾಗಿದೆ ಎಂದು ಜರಿದರು.
ರಾಮಗರ ಜಿಲ್ಲೆಯಲ್ಲಿ ಏತ ನೀರಾವರಿ ಮಾಡಿ ತೋರಿಸಿಕೊಟ್ಟವರು ಬಿಜೆಪಿಯವರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆ ರೂಪಿಸಿತ್ತು. ಇದಕ್ಕಿಂತ ಬೇರೆ ಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಸಂಪೂರ್ಣವಾಗಿ ಹಿಂದುಳಿದವರಲ್ಲಿ ಹಿಂದುಳಿದವರು ನಮ್ಮ ದೇಶದ ಕಾರ‌್ಯಕರ್ತರಾಗಿದ್ದ ಪ್ರಧಾನಿ ನರೇಂದ್ರಮೋದಿ, ಜೆ.ಪಿ. ನಡ್ಡಾ, ಅಮಿತ್‌ಷಾ, ಅಷ್ಟೇ ಏಕೆ ರಾಮನಾಥ್‌ಕೋವಿಂದ್ ಸಹ ಈ ರಾಷ್ಟ್ರದ ಉನ್ನತ ಹುದ್ದೆಯನ್ನು ಅಲಂಕಸಿದ್ದಾರೆ. ಇಷ್ಟು ಸಾಕಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಶೀರ್ವಚನ ನಮ್ಮಲ್ಲಿ ಇಲ್ಲ. ಸ್ಪಷ್ಟತೆಯಿಂದ ಕಾರ‌್ಯಕರ್ತನಾಗಿದ್ದರೆ ಯಾರು ಯಾವ ಎತ್ತರಕ್ಕೂ ಬೆಳೆಯಬಹುದು. ಸಾರ್ವಜನಿಕರ ಆಶಯದ ಪ್ರಕಾರವಾಗಿ ನಮ್ಮ ಪಕ್ಷ ನಡೆಯುತ್ತದೆ. ಅದು ಬಿಟ್ಟು ಇಲ್ಲದ ರಾಜಕಾರಣ ಮಾಡಿಕೊಂಡು ಅಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ತಿವಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!