Friday, December 9, 2022

Latest Posts

ಶಾಲಾ ಕೊಠಡಿಯಲ್ಲಿ ರಾಜಕಾರಣ ಸಲ್ಲದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ಕಲಬುರಗಿ:

ಶಾಲಾ ಕಾಲೇಜಿನ ಕೊಠಡಿಗಳ ನಿರ್ಮಾಣದಲ್ಲಿ ಸಹ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಕಲಬುರಗಿ ತಾಲೂಕಿನ ಮಾಡಿಹಾಳ ತಾಂಡಾದಲ್ಲಿ ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಗತಿಯುಳ್ಳ ಯಾವುದೇ ಕೆಲಸ ಮಾಡಿದರೂ ವಿವಾದ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ.ಟೀಕೆ ಮಾಡುವವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎನಿಸುತ್ತದೆ ಎಂದರು.

ಕೇಸರಿ ಅಂದರೆ ಭಯವೇಕೆ ? ನಮ್ಮ ರಾಷ್ಟ್ರದ ಧ್ವಜದಲ್ಲಿ ಸಹ ಕೇಸರಿ ಬಣ್ಣವಿದೆ. ವಿವೇಕಾನಂದರಂತಹ ಸನ್ಯಾಸಿಗಳು ಸಹ ಕೇಸರಿ ಬಟ್ಟೆ ಹಾಕಿಕೊಳ್ಳುತ್ತಿದ್ದರು ಎಂದರು.

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮಕ್ಕಳಿಗೆ ಸಿಹಿ ತಿನ್ನಿಸಿ,ಮುಖ್ಯಮಂತ್ರಿ ಮಕ್ಕಳ ದಿನಾಚರಣೆ ಆಚರಣೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!