ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ಅನುಮತಿ ಇಲ್ಲದೆ ಈಶ ಫೌಂಡೇಷನ್ ಕಟ್ಟಡಗಳನ್ನು ಕಟ್ಟಿದೆ ಎಂದು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್ ನೀಡಿದ್ದು, ಅದನ್ನು ರದ್ದುಪಡಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಜೊತೆಗೆ ಸಂಸ್ಥೆಯ ಯೋಗ ಮತ್ತು ಧ್ಯಾನ ಕೇಂದ್ರದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಅದು ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಸೂಚನೆ ಹಾಗೂ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಕೊಯಮತ್ತೂರಿನ ವೆಲ್ಲಿಯಂಗಿರಿ ಬೆಟ್ಟದ ತಪ್ಪಲಿನಲ್ಲಿ, ಈಶ ಫೌಂಡೇಶನ್ ಅನುಮತಿ ಇಲ್ಲದೆ ಕಟ್ಟಡಗಳನ್ನ ನಿರ್ಮಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ದೂರಿತ್ತು. ಅದನ್ನು ಹೈಕೋರ್ಟ್ 2022ರ ಡಿ.14ರಂದು ರದ್ದುಗೊಳಿಸಿತ್ತು. ಬಳಿಕ ಮಂಡಳಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.