ತಮಿಳಿನ ಬಾಹುಬಲಿ ಆಗುತ್ತಾ ಪೊನ್ನಿಯನ್ ಸೆಲ್ವನ್..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿರತ್ನಂ ನಿರ್ದೇಶನದಲ್ಲಿ ಪೊನ್ನಿಯನ್ ಸೆಲ್ವನ್ ಬೃಹತ್ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ಚಿತ್ರವಾಗಿ ಬರುತ್ತಿದೆ. ಸುಮಾರು 500 ಕೋಟಿ ಬಜೆಟ್‌ನಲ್ಲಿ ತಮಿಳಿನ ಹಲವು ತಾರೆಯರು ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿದೆ.

ಪೊನ್ನಿಯನ್ ಸೆಲ್ವನ್ ಕಲ್ಕಿ ಬರೆದ ಕಾದಂಬರಿಯಾಧಾರಿತ ಥ್ರಿಲ್ಲರ್ ಸಿನಿಮಾ ಆಗಿದೆ. ಚೋಳ ದೊರೆಗಳ ವಿಜಯ, ರಾಜಮನೆತನದ ಪಿತೂರಿಗಳು ಮತ್ತು ಒಳಸಂಚುಗಳನ್ನು ಬಿಚ್ಚಿಡಲಿದೆ.  ಚೋಳ ಸಾಮ್ರಾಜ್ಯದ ರಾಜಕುಮಾರನ ಪಾತ್ರದಲ್ಲಿ ಆದಿತ್ಯ ಕರಿಕಾಳನ್ ಲುಕ್‌ನಲ್ಲಿ ವಿಕ್ರಮ್ ಮಿಂಚಲಿದ್ದಾರೆ. ವಾಂತಿಯಾ ದೇವನ ಪಾತ್ರದಲ್ಲಿ ಕಾರ್ತಿ ಲುಕ್ ಸಖತ್ತಾಗಿದೆ. ನಂದಿನಿ ಪಾತ್ರದಲ್ಲಿ ನಟಿಸುತ್ತಿರುವ ಐಶ್ವರ್ಯಾ ರೈ ಮತ್ತು ಕುಂದುವಾಯಿ ಪಾತ್ರದಲ್ಲಿ ನಟಿಸುತ್ತಿರುವ ತ್ರಿಷಾ ಅವರ ಪೋಸ್ಟರ್ ಬಿಡುಗಡೆಯಾಗಿದೆ. ಇವರೊಂದಿಗೆ ಜಯಂ ರವಿ, ಶೋಭಿತಾ ಧೂಳಿಪಾಲ, ಶರತ್ ಕುಮಾರ್, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೊನ್ನಯನ್ ಸೆಲ್ವನ್ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಪೊನ್ನಿಯನ್ ಸೆಲ್ವನ್ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬೃಹತ್ ತಾರಾಗಣ ಮತ್ತು ಬೃಹತ್ ಬಜೆಟ್‌ನೊಂದಿಗೆ ಬಿಡುಗಡೆಯಾಗಲಿದೆ. ಇಂದು ಜುಲೈ 8 ರಂದು ಎಲ್ಲಾ ಭಾಷೆಗಳಲ್ಲೂ ಸ್ಟಾರ್ ಹೀರೋಗಳಿರುವ ಟೀಸರ್ ಬಿಡುಗಡೆಯಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರ ತೆರೆಕಾಣುತ್ತಿರುವ ಕಾರಣ ಬಾಹುಬಲಿ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಲ್ಲಿದ್ದಾರೆ. ಇದು ತಮಿಳಿನ ಬಾಹುಬಲಿ ಆಗಲಿದೆ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!