spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುಂಜತ್ತೂರು| ವಿದ್ಯುತ್ ಸಂಪರ್ಕಕ್ಕಾಗಿ ಬಡ ಕುಟುಂಬದ ಪರದಾಟ

- Advertisement -Nitte

ಹೊಸ ದಿಗಂತ ವರದಿ, ಕಾಸರಗೋಡು:

ಲೈಫ್ ಯೋಜನೆಯಡಿಯಲ್ಲಿ ಕೇರಳ ಸರಕಾರದ ಅನುದಾನದಿಂದ ನಿರ್ಗತಿಕ ಕುಟಂಬವೊಂದಕ್ಕೆ ನಿರ್ಮಿಸಲಾದ ಮನೆಗೆ ಬೇಕಾಗಿರುವ ಎಲ್ಲ ದಾಖಲು ಪತ್ರಗಳನ್ನು ಹಾಜರುಪಡಿಸಿ ಅದರ ಶುಲ್ಕವನ್ನು ಪಾವತಿಸಿ ದೃಢೀಕರಣದ ಸಂದೇಶ ತಲುಪಿ ಎರಡು ತಿಂಗಳು ಕಳೆದರೂ ಕೇರಳ ವಿದ್ಯುತ್ ಇಲಾಖೆಯ ಮಂಜೇಶ್ವರ ಸೆಕ್ಷನ್ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ನೀಡಲು ಸತಾಯಿಸುತ್ತಿರುವುದಾಗಿ ಬಿಪಿಎಲ್ ಕಾರ್ಡ್ ದಾರರಾಗಿರುವ ನಿರ್ಗತಿಕ ಕುಟುಂಬವೊಂದು ಆರೋಪಿಸಿದೆ.
ಕುಂಜತ್ತೂರು ನಿವಾಸಿ ಸಯ್ಯದ್ ಎಂಬವರು ತನ್ನ ಸಹೋದರ ಕುಂಜತ್ತೂರು ಚಕ್ರತೀರ್ಥ ಎಂಬಲ್ಲಿ ದಾನವಾಗಿ ನೀಡಿದ 6 ಸೆಂಟ್ಸ್ ಸ್ಥಳದಲ್ಲಿ ಕೇರಳ ಸರಕಾರದ ಲೈಫ್ ಯೋಜನೆಯಡಿ ಮಂಜೂರಾದ 4 ಲಕ್ಷ ರೂ. ಗಳಿಂದ ಮೊದಲ ಹಂತವಾಗಿ ಲಭಿಸಿದ 3 ಲಕ್ಷ ರೂ. ಮೂಲಕ ಮನೆ ನಿರ್ಮಾಣಗೊಳಿಸಿದರು. ಬಳಿಕ ಪಂಚಾಯತ್ ವತಿಯಿಂದ ಮನೆ ನಂಬ್ರ ಲಭಿಸಿದ ನಂತರ ಎಲ್ಲ ದಾಖಲಾತಿಗಳೊಂದಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಜೊತೆಯಾಗಿ ಅದರ ಶುಲ್ಕವನ್ನು ಪಾವತಿಸಿ ಸುಮಾರು ಎರಡು ತಿಂಗಳು ಕಳೆದರೂ ಈ ತನಕ ಯಾರೂ ಇತ್ತ ತಿರುಗಿಯೂ ನೋಡಲಿಲ್ಲ ಎಂಬುದಾಗಿ ಸಯ್ಯದ್ ಕುಟುಂಬ ಆರೋಪಿಸುತ್ತಿದೆ.
ಬಿಪಿಎಲ್ ಕಾರ್ಡ್ ದಾರರಾಗಿರುವ ಸಯ್ಯದ್ ಕುಟುಂಬಕ್ಕೆ ಸರಕಾರದಿಂದ ಮಂಜೂರುಗೊಂಡ ಮೊತ್ತದಿಂದ ಇನ್ನೂ ಒಂದು ಲಕ್ಷ ರೂ. ಲಭಿಸಲು ಬಾಕಿ ಇದೆ. ಆದರೆ ಅದು ಲಭಿಸಬೇಕಾದರೆ ಮನೆ ನಿರ್ಮಾಣ ಪೂರ್ಣಗೊಂಡು ವಿದ್ಯುತ್ ಸಂಪರ್ಕ ನೀಡಬೇಕಾಗಿದೆ. ಆ ಮೊತ್ತವನ್ನು ಕುಟುಂಬದವರಿಂದಲೂ, ಸ್ನೇಹತರಿಂದಲೂ ಸಾಲ ರೂಪದಲ್ಲಿ ಪಡದು ಸರಕಾರದ ಹಣ ಲಭಿಸಿದ ಕೂಡಲೇ ಹಿಂತಿರುಗಿಸುವ ಆಶ್ವಾಸನೆ ನೀಡಲಾಗಿದೆ. ಇದೀಗ ವಿದ್ಯುತ್ ಇಲಾಖೆಯವರಿಗೆ ಬೇಕಾದ ಎಲ್ಲ ಪುರಾವೆಗಳನ್ನು ಕೂಡ ತಾನು ಸಮರ್ಪಿಸಿದ್ದರೂ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿರುವುದು ಹಲವು ರೀತಿಯ ಸಂಶಯಗಳಿಗೆ ಕಾರಣವಾಗುತ್ತಿದೆ ಎಂದು ಸಯ್ಯದ್ ಹೇಳಿದ್ದಾರೆ.
ಮದ್ಯವರ್ತಿಗಳ ಜೇಬು ತುಂಬಿಸದೇ ಇದ್ದುದು ಈ ರೀತಿಯ ವಿಳಂಬಕ್ಕೆ ಕಾರಣವಾಗಿರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಈಗಾಗಲೇ ವಿದ್ಯುತ್ ಸಚಿವರಿಗೆ ಪತ್ರವನ್ನು ರವಾನಿಸಿರುವುದಾಗಿ ಸಯ್ಯದ್ ತಿಳಿಸಿದ್ದಾರೆ. ಯಾವ ಕಾರಣಕ್ಕೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ತನ್ನನ್ನು ಈ ರೀತಿ ಸತಾಯಿಸುತ್ತಿದ್ದಾರೆ ಎಂಬ ಕುರಿತು ಮಾಹಿತಿ ಹಕ್ಕು ಖಾಯಿದೆಯ ಪ್ರಕಾರವೂ ಮಾಹಿತಿ ಪಡೆಯಲು ಅವರು ನಿರ್ಧರಿಸಿದ್ದಾರೆ.
ಅರ್ಜಿ ಸಲ್ಲಿಸಿ ಒಂದು ವಾರದೊಳಗೆ ಎಲ್ಲರಿಗೂ ರೇಶನ್ ಕಾರ್ಡ್ ಹಾಗೂ ವಿದ್ಯುತ್ ಸಂಪರ್ಕ ನೀಡುವುದಾಗಿ ಸರಕಾರದ ಘೋಷಣೆಯಿರುವಾಗ ಸೆಕ್ಷನ್ ಅಧಿಕಾರಿಗಳು ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿ ಬಡಜನತೆಯ ತಾಳ್ಮೆ ಪರೀಕ್ಷಿಸುತ್ತಿರುವುದಾಗಿ ಕುಟುಂಬವು ಪ್ರತಿಕ್ರಿಯಿಸಿದೆ. ಇನ್ನೂ ವಿದ್ಯುತ್ ಸಂಪರ್ಕ ವಿಳಂಬವಾದರೆ ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿ ಮುಂಭಾಗದಲ್ಲಿ ಕುಟುಂಬದೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಿರುವುದಾಗಿ ಸಯ್ಯದ್ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss