Monday, October 2, 2023

Latest Posts

ಕಳಪೆ ಗುಣಮಟ್ಟದ ಔಷಧ, 18 ಕಂಪನಿಗಳ ಲೈಸೆನ್ಸ್ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳಪೆ ಗುಣಮಟ್ಟದ ಔಷಧ ತಯಾರಿಕೆ ಮಾಡುತ್ತಿದ್ದ18 ಕಂಪನಿಗಳ ಲೈಸೆನ್ಸ್‌ನ್ನು ರದ್ದುಮಾಡಲಾಗಿದೆ. ಈ ರೀತಿ ಕಂಪನಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಹಾಗೂ ಕೆಲ ರಾಜ್ಯ ಸರ್ಕಾರಗಳು 26 ಕಂಪನಿಗಳಿಗೆ ಸೇರಿದ ಸ್ಥಳಗಳ ಮೇಲೆ ಜಂಟಿ ತಪಾಸಣೆ ನಡೆಸಿವೆ.

ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧ ತಯಾರಿಕೆಯಲ್ಲಿ ತೊಡಗಿದ್ದ 18ಕಂಪನಿಗಳ ಲೈಸೆನ್ಸ್‌ನ್ನು ರದ್ದು ಮಾಡಲಾಗಿದೆ. ಒಟ್ಟಾರೆ 15 ದಿನಗಳಿಂದ ತಪಾಸಣೆ ನಡೆಯುತ್ತಿದ್ದು, ಯಾವ ಕಂಪನಿಗಳ ಲೈಸೆನ್ಸ್ ರದ್ದಾಗಿದೆ ಎನ್ನುವ ಮಾಹಿತಿ ಹೊರಬಿದ್ದಿಲ್ಲ.

26 ಕಂಪನಿಗಳಿಗೆ ಷೋಕಾಸ್ ನೋಟೀಸ್ ಜಾರಿಮಾಡಲಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶದಲ್ಲಿ ಹೆಚ್ಚು ಕಂಪನಿಗಳನ್ನು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!