ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಆರೋಗ್ಯ ಇಲಾಖೆ ತಪ್ಪು ಮಾಡಿ ಇದೀಗ ಪೇಚಿಗೆ ಸಿಲುಕಿದೆ. ತಪ್ಪು ಸರಿಮಾಡುವಷ್ಟರಲ್ಲಿ ನೆಟ್ಟಗರು ಸರ್ಕಾರವನ್ನು ಟ್ರೋಲ್ ಮಾಡಿದ್ದಾರೆ. ಆರೋಗ್ಯ ಇಲಾಖೆಯು ಕೆನಡಾದ ಕೋವಿಡ್ ಪೋರ್ಟಲ್ನಲ್ಲಿ ಪೋಸ್ಟ್ ಮಾಡಬೇಕಾದ ಲಿಂಕ್ ಬದಲಿಗೆ ಪೋರ್ನ್ ಹಬ್ನ ಲಿಂಕ್ ಅನ್ನು ಪೋಸ್ಟ್ ಮಾಡಿದೆ. ತಕ್ಷಣ ತಪ್ಪನ್ನು ಗಮನಿಸಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಆಕಸ್ಮಿಕವಾಗಿ ಟ್ವಿಟ್ಟರ್ನಲ್ಲಿ ಪೋಸ್ಟ್ ಆಗಿದೆ ಎಂದು ಆರೋಗ್ಯ ಸಚಿವಾಲಯವು ಎಎಫ್ಪಿಗೆ ಇಮೇಲ್ ಮಾಡಿದೆ. ಆದರೆ ಒಂದು ಮಿಲಿಯನ್ಗಿಂತಲೂ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ಗಳನ್ನು ಹೊಂದಿರುವ ಆರೋಗ್ಯ ಸಚಿವಾಲಯದ ಕುರಿತು ತನಿಖೆಯನ್ನು ಪ್ರಾರಂಭಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ನಡೆದುಹೋಗಿದೆ. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವಾಲಯದ ವಿರುದ್ಧ ಕಮೆಂಟ್ಗಳ ಸುರಿಮಳೆ ಹರಿದಿದೆ.
En raison d’une situation hors de notre contrôle, un lien avec du contenu inapproprié a été publié sur notre compte Twitter. Nous en cherchons les causes. Nous sommes désolés des inconvénients.
— Santé Québec (@sante_qc) April 14, 2022