Wednesday, August 10, 2022

Latest Posts

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣ: ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್ ನಲ್ಲಿ ನಿನ್ನೆಯಷ್ಟೇ​ ಜಾಮೀನು ಸಿಕ್ಕಿದ್ದು, ಇಂದು ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾದರು.

ಹೌದು.. ಬಂಧನಕ್ಕೆ ಒಳಗಾಗದ ಎರಡು ತಿಂಗಳ ನಂತರ ಆರ್ಥರ್‌ ಜೈಲಿನಿಂದ ಬೆಳಿಗ್ಗೆ 11.30ರ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

2021ರ ಫೆಬ್ರುವರಿಯಲ್ಲಿ ಮುಂಬೈನ ಅಪರಾಧ ವಿಭಾಗದಲ್ಲಿ ರಾಜ್ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಜುಲೈ 19ರಂದು ಕುಂದ್ರಾ ಅವರನ್ನು ಬಂಧಿಸಲಾಗಿತ್ತು.

ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ವಿರುದ್ಧ 1,400 ಪುಟಗಳ ಆರೋಪ ಪಟ್ಟಿಯನ್ನು ತಯಾರಿಸಿ, ಅದನ್ನು ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಕೆ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss