ಚುನಾವಣೋತ್ತರ ಸಮೀಕ್ಷೆ: ತ್ರಿಪುರಾ, ನಾಗಾಲ್ಯಾಂಡ್ ಬಿಜೆಪಿ ಪಾಲು: ಮೆಘಾಲಯ ಗದ್ದುಗೆ ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ಚುನಾವಣೆ ನಡೆದಿದ್ದು, ಮಾರ್ಚ್ ೨ರಂದು ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಇದರ ಮುನ್ನ ಇಂದು ಚುನಾವಣೋತ್ತರ ಸಮೀಕ್ಷೆಗಳು ನಡೆದಿದ್ದು, ಉತ್ತರ ನೀಡುವ ಪ್ರಯತ್ನ ಮಾಡಿದೆ.

ಸಮೀಕ್ಷೆಗಳ ಪ್ರಕಾರ, 3 ರಾಜ್ಯಗಳ ಪೈಕಿ ಎರಡು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ . ಮೈತ್ರಿ ಸರ್ಕಾರವಿರುವ ಮೆಘಾಲಯದಲ್ಲಿ ಸರ್ಕಾರ ಕಳೆದುಕೊಳ್ಳುವ ಆತಂಕವಿದೆ ಎಂದಿದೆ.
ತ್ರಿಪುರಾ ಹಾಗೂ ನಾಗಲ್ಯಾಂಡ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ವರದಿ ನೀಡಿದೆ.

ತ್ರಿಪುರಾ ರಾಜ್ಯದ ಮತದಾನ ಫೆಬ್ರವರಿ 16ಕ್ಕೆ ನಡೆದಿತ್ತು. ಮೆಘಾಲಯ ಹಾಗೂ ನಾಗಾಲ್ಯಾಂಡ್ ರಾಜ್ಯದ ಮತದಾನ ಇಂದು ಪೂರ್ಣಗೊಂಡಿದೆ.

ಮೇಘಾಲಯದಲ್ಲಿ ಹಾಲಿ ಬಿಜೆಪಿ-ಎನ್‌ಪಿಪಿ ಅಧಿಕಾರದಲ್ಲಿದೆ.ಆದರೆ ಸಮೀಕ್ಷೆಗಳ ಪ್ರಕಾರ ಮೆಘಾಲಯ ಬಿಜೆಪಿ ಕೈತಪ್ಪುವ ಸೂಚನೆ ನೀಡಿದೆ. ಬಿಜೆಪಿ ಹಾಗೂ ಎನ್‌ಪಿಪಿ ಸ್ವತಂತ್ರವಾಗಿ ಸ್ಪರ್ಧಿಸಿದೆ. ಇದರ ಜೊತೆಗೆ ತೃಣಮೂಲ ಕಾಂಗ್ರೆಸ್ ಕೂಡ ಸ್ಪರ್ಧಿಸಿದೆ. ಮೆಘಾಲಯದ 59 ಸ್ಥಾನಗಳಿಗೆ ಚುನಾವಣೆ ನಡೆದಿದೆ.ಈ ಪೈಕಿ ಸರ್ಕಾರ ರಚಿಸಲು 30 ಸ್ಥಾನ ಗೆಲ್ಲಬೇಕಿದೆ.

ಮೇಘಾಲಯದ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)
ಬಿಜೆಪಿ: 6-11 ಸ್ಥಾನ
ಟಿಎಂಸಿ: 8-13 ಸ್ಥಾನ
ಕಾಂಗ್ರೆಸ್:3-6 ಸ್ಥಾನ
ಇತರರು :10-19 ಸ್ಥಾನ

ನಾಗಾಲ್ಯಾಂಡ್‌ನಲ್ಲಿ ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ನಾಗಾಲ್ಯಾಂಡ್‌ನ 60 ವಿಧಾನಸತ್ರಾ ಕ್ಷೇತ್ರಗಳ ಪೈಕಿ 59 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಅವಿರೋಧವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಮ್ಯಾಜಿಕ್ ನಂಬರ್ 31

ನಾಗಾಲ್ಯಾಂಡ್ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)
ಬಿಜೆಪಿ(NDA): 39
ಎನ್‌ಪಿಎಫ್: 3
ಕಾಂಗ್ರೆಸ್: 2
ಇತರರ:15

ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 60 ಸ್ಥಾನಗಳಿಗೆ ಮತದಾನ ನಡೆದಿತ್ತು. ಮ್ಯಾಜಿಕ್ ನಂಬರ್ 31.

ತ್ರಿಪುರ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)
ಬಿಜೆಪಿ(NDA): 40
ಟಿಎಂಪಿ: 12
ಸಿಪಿಎಂ:8
ಇತರರು:0

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!