ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಬಾಲಿವುಡ್ ನಟಿ, ಮಾಡೆಲ್ ಸೆಲಿನಾ ಜೇಟ್ಲಿ ಆಪರೇಷನ್ ಸಿಂಧೂರ್ ಅನ್ನು ಶ್ಲಾಘಿಸಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಭಾರತೀಯ ಸೇನೆಗೆ ಬೆಂಬಲ ನೀಡಿದ ನಂತರ, ಜೇಟ್ಲಿ ಭಾರಿ ಟ್ರೋಲಿಂಗ್‌ಗೆ ಗುರಿಯಾಗಿದ್ದರು.
ಈ ಬೆನ್ನಲ್ಲೇ ಖಡಕ್ ಉತ್ತರ ನೀಡಿರುವ ನಟಿ, ನನ್ನ ರಾಷ್ಟ್ರದ ಪರವಾಗಿ ನಿಂತಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ಭಯೋತ್ಪಾದನೆಯ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡಾಗ ನಾನು ಎಂದಿಗೂ ಮೌನವಾಗಿರುವುದಿಲ್ಲ.
ಗಡಿಗಳನ್ನು ಲೆಕ್ಕಿಸದೆ ನಾನು ಪ್ರತಿ ಮುಗ್ಧ ಜೀವಕ್ಕೂ ಶೋಕಿಸುತ್ತೇನೆ. ಆದರೆ ಹಿಂಸೆಯನ್ನು ಸಮರ್ಥಿಸುವ ಅಥವಾ ವೈಭವೀಕರಿಸುವವರೊಂದಿಗೆ ನಾನು ಎಂದಿಗೂ ನಿಲ್ಲುವುದಿಲ್ಲ. ಭಾರತದ ಮೇಲಿನ ನನ್ನ ಪ್ರೀತಿ ನಿಮ್ಮನ್ನು ನೋಯಿಸಿದರೆ, ಭಯೋತ್ಪಾದನೆಯ ವಿರುದ್ಧದ ನನ್ನ ಧ್ವನಿ ನಿಮಗೆ ಬೆದರಿಕೆ ಹಾಕಿವಂತಿದ್ದರೆ, ಹೆಮ್ಮೆಯಿಂದ ನನ್ನನ್ನು ಅನ್ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ.