spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತ್ತೆ ʼಆರ್‌ಆರ್‌ಆರ್‌ʼ ಸಿನಿಮಾ ರಿಲೀಸ್‌ ಡೇಟ್ ಮುಂದೂಡಿಕೆ?

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಎಸ್​​.ಎಸ್​. ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದಕ್ಕೆ ಬೇರೆಯದೇ  ತೂಕ ಇರುತ್ತದೆ. ಅವರ ನಿರ್ದೇಶನದ ಸಿನಿಮಾಗಳು ಆಲ್‌ ಮೋಸ್ಟ್‌ ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ ‘ಆರ್​ಆರ್​ಆರ್​’ ಸಿನಿಮಾ  ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಟೀಸರ್​ ಹಾಗೂ ಪೋಸ್ಟರ್​ಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ.

ಅಂದುಕೊಂಡಂತೆ ನಡೆದರೆ ಜ.7ರಂದು ಆರ್‌ಆರ್‌ಆರ್‌ ಸಿನಿಮಾ ತೆರೆಗೆ ಬರಲಿದೆ.  ಆದರೆ ಒಮಿಕ್ರಾನ್‌ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಬಹುದು ಎಂಬ ಅನುಮಾನ ಶುರುವಾಗಿದೆ.

ಏಕೆಂದರೆ ಡಿಸೆಂಬರ್​ 3ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಬೇಕಿತ್ತು. ಆದರೆ ಮುಂದೂಡಲಾಗಿದೆ. ಯಾವ ಕಾರಣಕ್ಕೆ ರಿಲೀಸ್‌ ಡೇಟ್‌ ಮುಂದೂಡಲಾಗಿದೆ ಎಂಬ ಬಗ್ಗೆ ಚಿತ್ರ ತಂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ‘ಆರ್​ಆರ್​ಆರ್​’ ಚಿತ್ರದ  ಟ್ವಿಟ್ಟರ್‌ ನಲ್ಲಿ “ಅನಿರೀಕ್ಷಿತ ಕಾರಣಗಳಿಂದಾಗಿ ನಾವು ಡಿ.3ರಂದು ಆರ್​ಆರ್​ಆರ್​ ಟ್ರೇಲರ್​ ಬಿಡುಗಡೆ ಮಾಡುತ್ತಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇನೆ’ ಎಂದು ಹೇಳಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss