ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಗರದ ಪ್ರಮುಖ ನಗರಗಳಾದ ಮಲ್ಲಢಶ್ವರ ನಲ್ಲಿ ಬೆಳಗ್ಗೆ 10 ರಿಂದ 2 ಗಂಟೆವರೆಗೆ ಅಥವಾ 11ರಿಂದ 2 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಇನ್ನೂ ರಾಜಾಜಿನಗರ, ಆರ್ ಆರ್ ನಗರ, ಪದ್ಮನಾಭನಗರ, ಕತ್ರಿಗುಪ್ಪೆ ಹಾಗೂ ಕೆಂಗೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ ಎಂದು ತಿಳಿಸಿದೆ.
ಶ್ರೀರಾಮಪುರ, ಪ್ರಕಾಶನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್ಕೆ ಗಾರ್ಡನ್, ನೇತಾಜಿ ವೃತ್ತ, ಪಂಪಾ ನಗರ, ಮತ್ತಿಕೆರೆ, ಮಾರುತಿ ಲೇಔಟ್, ಬಿಕಿಸಿಪುರ, ಇಸ್ರೋ ಲೇಔಟ್, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಅನ್ನಪೂರ್ಣ ಕೈಗಾರಿಕಾ ಪ್ರದೇಶ, ಸಿಆರ್ ನಗರ 1ನೇ ಹಂತ, ಕರಿಸಂದ್ರ, ಕೆಆರ್ ಮುಖ್ಯ ರಸ್ತೆ, ರಾಘವೇಂದ್ರ ಲೇಔಟ್, ಪದ್ಮನಾಭನಗರ, ಜೆ.ಪಿ.ನಗರ 5 ನೇ ಹಂತ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಮಾರ್ಥಾಸ್ ಆಸ್ಪತ್ರೆ ರಸ್ತೆ ಸೇರಿದಂತೆ ಹಲವೆಡೆ ಪವರ್ ಕಟ್ ಆಗಲಿದೆ.