Sunday, August 14, 2022

Latest Posts

ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರ ಚಂಡಮಾರುತ: ಟಿವಿ, ಮೊಬೈಲ್, ಜಿಪಿಎಸ್ ಸಿಗ್ನಲ್ ಹಾನಿ ಸಾಧ್ಯತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರಬಲ ಸೌರ ಚಂಡಮಾರುತವೊಂದು ಭೂಮಿಯತ್ತ ಹೊರಟಿದ್ದು, ಇಂದು 1.6  ದಶಲಕ್ಷ ಕಿ.ಮೀ. ವೇಗದಲ್ಲಿ ಭೂಮಿಯ ಆಯಸ್ಕಾಂತೀಯ ಕಕ್ಷೆಯತ್ತ ಸಮೀಪಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ರೀತಿ ಆದಲ್ಲಿ, ಮೊಬೈಲ್ ನೆಟ್‌ವರ್ಕ್ ಮತ್ತು ಜಿಪಿಎಸ್ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೌರ ಮಾರುತದ ಪ್ರಭಾವದಿಂದ ಜಿಜಿಎಸ್ ನ್ಯಾವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ಸ್, ಸ್ಯಾಟಿಲೈಟ್ ಟಿವಿಗಳಿಗೆ ತೊಂದರೆಯಾಗಬಹುದು.  ಈ ಸೌರ ಜ್ವಾಲೆಗಳ ಕಾರಣದಿಂದ ವಿದ್ಯುತ್ ವ್ಯವಸ್ಥೆಯಲ್ಲೂ ವ್ಯತ್ಯಯಗಳಾಗಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss