ಸಾಲದ ಬಲೆಯಲ್ಲಿ ಸಿಲುಕಿದ್ದರಂತೆ ಪ್ರಭಾಸ್: ʻಬಾಹುಬಲಿ ಒಪ್ಪಿಕೊಂಡರೂ ಬೇರೆ ಸಿನಿಮಾ ಮಾಡಿದ್ದೇನೆʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಯ್ಯ ಬಾಬು ಅನ್‌ಸ್ಟಾಪಬಲ್ ಮೊದಲ ಸಂಚಿಕೆಯನ್ನು ಡಿಸೆಂಬರ್ 29 ರ ರಾತ್ರಿ ಬಿಡುಗಡೆ ಮಾಡಿ ಪ್ರಭಾಸ್ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ. ಎಪಿಸೋಡ್‌ನಲ್ಲಿ ಪ್ರಭಾಸ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು ಬಾಲಯ್ಯ. ಪ್ರಭಾಸ್ ನಟನಾಗಿ 20 ವರ್ಷ ಪೂರೈಸಿದ್ದಕ್ಕೆ ಅಭಿಮಾನಿಗಳ ಜೊತೆ ಸ್ಪೆಷಲ್ ಶೂಟ್ ಮಾಡಿಸಿದ ಪ್ರೋಮೋ ಕೂಡ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್ ಸಿನಿಮಾ, ಮದುವೆ ಹೀಗೆ ಹಲವು ವಿಷಯಗಳನ್ನು ಬಾಲಯ್ಯ ಪ್ರಸ್ತಾಪಿಸಿದರು. ಈ ವೇಳೆ ಸಾಲ ಇದ್ದ ಕಾರಣ ಬಾಹುಬಲಿ ಸಿನಿಮಾ ಒಪ್ಪಿಕೊಂಡ ನಂತರವೂ ಎರಡು ಸಿನಿಮಾಗಳನ್ನು ಮಾಡಿದ್ದಾಗಿ ಪ್ರಭಾಸ್‌ ಹೇಳಿದರು.

ಮಿಸ್ಟರ್ ಪರ್ಫೆಕ್ಟ್ ಸಿನಿಮಾ ಆದ ನಂತರ ಬಾಹುಬಲಿ ಒಪ್ಪಿಕೊಂಡೆ. ರಾಜಮೌಳಿ ತಡವಾಗಿ ಸಿನಿಮಾ ಮಾಡುವ ವಿಚಾರ ಗೊತ್ತೇ ಇದೆ ಈ ಗ್ಯಾಪ್ ನಲ್ಲಿ ರೆಬೆಲ್ ಸಿನಿಮಾ ಮಾಡಿದ್ದೇನೆ. ಬಾಹುಬಲಿ ಚಿತ್ರೀಕರಣ ಆರಂಭಿಸುತ್ತೇವೆ ಎಂದಾಗ ಮಿರ್ಚಿ ಮಾಡುವ ಯೋಚನೆ ತಲೆಗೆ ಬಂತು. ರಾಜಮೌಳಿ ಪರ್ಮಿಷನ್ ತಗೊಂಡು ರೆಬಲ್‌ ಮಾಡಿದ್ದೆ ಈಗ ಮತ್ತೊಮ್ಮೆ ಕೇಳಿದ್ರೆ ಏನಂತಾರೋ ಅಂತ ಭಯ ಕೂಡ ಇತ್ತು ಎಂದರು. ಹೆಚ್ಚಾಗಿ ಸಾಲ ಇದ್ದುದರಿಂದ ಬೇರೆ ಸಿನಿಮಾ ಮಾಡದೆ ಬೇರೆ ದಾರಿಯೇ ಇರಲಿಲ್ಲ.

ಆಗ ರಮಾ ಮೇಡಂ(ರಾಜಮೌಳಿ ಪತ್ನಿ) ಇವರಿಗೆ ಇನ್ನೂ ಸಮಯ ಬೇಕು ಅಷ್ಟರಲ್ಲಿ ಮಿರ್ಚಿ ಸಿನಿಮಾ ಮುಗಿಸು ಎಂದು ಅನುಮತಿ ಕೊಟ್ಟರು. ಬಾಹುಬಲಿ ಒಪ್ಪಿಕೊಂಡ ನಂತರ ರೆಬೆಲ್ ಮತ್ತು ಮಿರ್ಚಿ ಸಿನಿಮಾ ಮಾಡಿದ್ದೇನೆ ಎಂಬ ವೃತ್ತಾಂತವನ್ನು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!