CINE| `ಆದಿಪುರುಷ್‌’ ಶ್ರೀರಾಮನವಮಿ ಗಿಫ್ಟ್:‌ ಸೀತಾಸಮೇತ ರಾಮನ ಪೋಸ್ಟರ್‌ ರಿಲೀಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಆದಿಪುರುಷ’ ಚಿತ್ರ ಘಟಕವು ಅಂತಿಮವಾಗಿ ಸಖತ್ ಅಪ್‌ಡೇಟ್ ಅನ್ನು ನೀಡಿದೆ. ಈ ಸಿನಿಮಾದ ಶೂಟಿಂಗ್ ಮೊನ್ನೆಯಷ್ಟೇ ಮುಗಿದಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡುತ್ತಲೇ ಬಂದಿದೆ. ಓಂ ರಾವುತ್ ನಿರ್ದೇಶನದ ಈ ಪ್ರತಿಷ್ಠಿತ ಪೌರಾಣಿಕ ಚಿತ್ರ ರಾಮಾಯಣವನ್ನು ಆಧರಿಸಿದೆ.

ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಗಮನ ಸೆಳೆಯುವ ಗ್ರಾಫಿಕ್ಸ್ ಇರಲಿದೆ. ಈ ಚಿತ್ರದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. VFX ಕೆಲಸಗಳನ್ನು ಉತ್ತಮ ಗುಣಮಟ್ಟಕ್ಕೆ ಪೂರ್ಣಗೊಳಿಸಲು ಚಿತ್ರ ಘಟಕವು ಸ್ವಲ್ಪ ಸಮಯ ತೆಗೆದುಕೊಂಡಿತು. ಆದರೆ, ಈ ಸಿನಿಮಾದಿಂದ ಯಾವುದೇ ಅಪ್‌ಡೇಟ್‌ ಇಲ್ಲ ಎಂಬ ಮಾತು ಕೇಳಿಬರುತ್ತಿದ್ದ ಬೆನ್ನಲ್ಲೇ ಶ್ರೀರಾಮನವಮಿ ಪರ್ವದಿನ್ನದ ಸಂದರ್ಭದಲ್ಲಿ ಈ ಚಿತ್ರದಿಂದ ಸಖತ್ ಅಪ್ಡೇಟ್ ನೀಡಲಾಗಿದೆ. ಚಿತ್ರತಂಡ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಹೊಸ ಪೋಸ್ಟರ್‌ನೊಂದಿಗೆ ಪ್ರಕಟಿಸಿದೆ.

ಸೀತೆಯ ಜೊತೆಗೆ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಲುಕ್ ಅದ್ಭುತವಾಗಿದೆ. ಈ ಪೋಸ್ಟರ್ ಅನ್ನು ನಾವು ಪ್ರತಿ ಮನೆಯಲ್ಲೂ ನೋಡುವ ಭಗವಾನ್ ರಾಮನ ಫೋಟೋದ ಪ್ರತಿರೂಪವಾಗಿ ವಿನ್ಯಾಸಗೊಳಿಸಲಾಗಿದೆ. ಸೀತೆ, ಲಕ್ಷ್ಮಣ ಸಮೇತ ಶ್ರೀರಾಮನಿಗೆ ಹನುಮಂತ ರಾಜದಂಡ ನೀಡುವ ಪೋಸ್ಟರ್ ಅನ್ನು ಆದಿಪುರುಷ ಚಿತ್ರತಂಡ ಬಿಡುಗಡೆ ಮಾಡಿದೆ. ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಈ ಪೋಸ್ಟರ್‌ನಲ್ಲಿ ಹನುಮಂತನಾಗಿ ದೇವದತ್ತ ನಾಗೆ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಆದಿಪುರುಷ ಚಿತ್ರದ ನಿರೀಕ್ಷೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಅದ್ಧೂರಿ ಬಜೆಟ್‌ನಲ್ಲಿ ಟಿ-ಸೀರೀಸ್ ಮತ್ತು ರೆಟ್ರೋಫೈಲ್ಸ್ ಜಂಟಿಯಾಗಿ ನಿರ್ಮಿಸಿರುವ ಆದಿಪುರುಷ ಚಿತ್ರ ಜೂನ್ 16 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ಘಟಕ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!