spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿತ್ಯ ಪ್ರಾಣಾಯಾಮದ ಜೊತೆ ಕಪಾಲಭಾತಿ ಮಾಡಿ: ಅದರಲ್ಲಿನ ಪ್ರಯೋಜನಗಳು ಏನು ಗೊತ್ತಾ?

- Advertisement -Nitte

ಕಪಾಲಭಾತಿ ವಿಶೇಷವಾಗಿ ಶುದ್ಧೀಕ್ರಿಯೆಗಾಗಿ ಮಾಡಲಾಗುತ್ತದೆ. ಇದರಿಂದ ಹೊಟ್ಟೆ, ಕರುಳು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಿದ್ದರೆ ಇದರಲ್ಲಿನ ಲಾಭಗಳೇನು ನೋಡಿ..

ಉನ್ನತ ಪ್ರಾಣಾಯಾಮಕ್ಕೆ ತಯಾರಿ:
ಚಂದ್ರನಾಡಿ (ಎಡ ಮೂಗಿನ ಹೊರಳೆ) ಹಾಗೂ ಸೂರ್ಯನಾಡಿಯ (ಬಲ ಮೂಗಿನ ಹೊರಳೆ) ಮೂಲಕ ಜೋರಾಗಿ ಉಸಿರಾಡುವುದರಿಂದ ರಕ್ತದಲ್ಲಿನ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪ್ರಾಣಾಯಾಮಕ್ಕೆ ಸಹಕಾರಿಯಾಗಲಿದೆ.

ಶ್ವಾಸಕೋಶ:
ಕಪಾಲಭಾತಿ ಮಾಡುವುದರಿಂದ ಶ್ವಾಸಕೋಶ ಶುದ್ಧೀಕರಣಕೊಳಿಸಲು ಸಹಕಾರಿಯಾಗಲಿದೆ.

ತೂಕ ಇಳಿಕೆ:
ಪ್ರತಿ ನಿತ್ಯ ಕಪಾಲಭಾತಿ ಮಾಡುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ ಬೊಜ್ಜು ಕರಗುತ್ತದೆ. ಇದು ದೇಹದಲ್ಲಿನ ಕಫದ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆ:
ಕಪಾಲಭಾತಿ ಮಾಡುವುದರಿಂದ ಕಿಬ್ಬೊಟ್ಟೆಯ ಭಾಗದ ಮೇಲೆ ಪರಿಣಾಮ ಬೀರಲಿದ್ದು, ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಲಿದೆ.

ಕಫ ನಿವಾರಣೆ:
ಕಪಾಲಭಾತಿ ಅಭ್ಯಾಸಗಳು ವಾತ, ಪಿತ್ತ, ಕಫಗಳನ್ನು ನಿಯಂತ್ರಿಸಲಿದೆ.

ನೆನಪಿನ ಶಕ್ತಿ:
ಕಪಾಲಭಾತಿ, ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿನ ರಕ್ತ ಸಂಚಲನ ಹೆಚ್ಚಾಗುತ್ತದೆ. ಇದರಿಂದ ನೆನಪಿನ ಶಕ್ತಿ ಕೂಡ ಹೆಚ್ಚಾಗಲಿದೆ.

ಕಪಾಲಭಾತಿ ಮಾಡುವುದು ಹೇಗೆ?:

ಮೊದಲಿಗೆ ನೆಲದ ಮೇಲೆ ಚಾಪೆ ಹಾಸಿಕೊಳ್ಳಿ.
ನಂತರ ವಜ್ರಾಸನ ಅಥವಾ ಸುಖಾಸನದಲ್ಲಿ ಬೆನ್ನು ನೇರವಾಗಿ ಇಟ್ಟುಕೊಂಡು ಕುಳಿತುಕೊಳ್ಳಿ.
ಬಳಿಕ ನಿಮ್ಮ ಹೆಬ್ಬೆರಳಿನಿಂದ ಚಂದ್ರನಾಡಿ (ಎಡ ಮೂಗಿನ ಹೊರಳೆ)ಯನ್ನು ಮುಚ್ಚಿ, ಸೂರ್ಯನಾಡಿಯಿಂದ( ಬಲ ಮೂಗಿನ ಹೊರಳೆ) ದೀರ್ಘ ಉಸಿರು ತೆಗೆದುಕೊಳ್ಳಿ.
ನಂತರ ಸೂರ್ಯನಾಡಿಯಿಂದಲೇ ಉಸಿರನ್ನು ಜೋರಾಗಿ ಹೊರಹಾಕಬೇಕು. ಉಸಿರು ಹೊರ ಹಾಕುವಾಗ ಹಸ್ ಶಬ್ಧ ಮಾಡಿಯೇ ಹೊರ ಹಾಕಬೇಕು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss