ರಾಜ್ಯದಲ್ಲಿ ಜನರು ಕಾಂಗ್ರೆಸ್ ಧ್ವನಿ ಅಡಗಿಸಿದ್ದಾರೆ: ಪ್ರಲ್ಹಾದ ಜೋಶಿ ವ್ಯಂಗ್ಯ

ಹೊಸದಿಗಂತ ವರದಿ ಹುಬ್ಬಳ್ಳಿ:

ದೇಶದ ಬಹುತೇಕ ರಾಜ್ಯದಲ್ಲಿ ಜನರು ಕಾಂಗ್ರೆಸ್ ಧ್ವನಿ ಅಡಿಗಿಸಿದ್ದು, ಈಗ ಅವರು ಪ್ರಜಾಧ್ವನಿ ಎಂದು ತಮ್ಮದೆ ಧ್ವನಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ಕುರಿತು ವ್ಯಂಗ್ಯವಾಡಿದರು. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಸೇರಿ ದೇಶದಲ್ಲಿ ಒಂದೆರಡು ರಾಜ್ಯಗಳು ಬಿಟ್ಟರೆ ಎಲ್ಲ ಕಡೆ ಜನರು ಕಾಂಗ್ರೆಸ್ ಧ್ವನಿ ಅಡಿಗಿಸಿದ್ದಾರೆ. ಬರುವ ವರ್ಷ ರಾಜಸ್ಥಾನ ಹಾಗೂ ಛತ್ತಿಸಘಡನಲ್ಲಿಯೂ ಕಾಂಗ್ರೆಸ್ ಗೆ ಅದೇ ಪರಿಸ್ಥಿತಿ ಬರಲಿದೆ ಎಂದರು.

ಸುಮಾರು 60 ವರ್ಷ ದೇಶ ಹಾಗೂ ರಾಜ್ಯದಲ್ಲಿ ಆಡಳಿತ ನಡೆದ ಕಾಂಗ್ರೆಸ್ 92 ಬಾರಿ ಚುನಾಯಿತ ಸರ್ಕಾರಗಳ ಕಿತ್ತೆಸಿದವರು ಈಗ ಪ್ರಜಾಧ್ವನಿ ಮಾಡಲು ಹೊರಟಿದ್ದಾರೆ ಎಂದರು. 200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇನೆ ಎನ್ನುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಹಣ ಪಡೆದು ವಿದ್ಯುತ್ ನೀಡಲು ಇವರಿಂದ ಆಗಿಲ್ಲ. ಪ್ರಧಾನಿ ಮೋದಿ ಬರುವರೆಗೆ ದೇಶ ವಿದ್ಯುತ್ ಕೊರತೆ ಅನುಭವಿಸುತ್ತಿತ್ತು. ಈಗ ಎಲ್ಲಿಯೂ ಸಹ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು‌.

ಕಾಂಗ್ರೆಸ್ ಅವರು ಅಧಿಕಾರದಲ್ಲಿರುವರೆಗೆ ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಮತಕ್ಕಾಗಿ ಸುಳ್ಳು ಹೇಳಿ ಜೀವನ ಮಾಡುತ್ತಿದ್ದಾರೆ. ನಾನಾಯಕಿ ಎಂದು ರಾಜ್ಯಕ್ಕೆ ಬಂದ ಹೋದ ನಕಲಿ ಗಾಂಧಿ ಕುಡಿಗಳು ರಾಜಸ್ಥಾನದಲ್ಲಿ ಅವರ ಸಹೋದರ ಹೇಳಿದ್ದು ಯಾಕೆ ಮಾಡಿಲ್ಲ ಎನ್ನುದಕ್ಕೆ ಉತ್ತರ ನೀಡಬೇಕು ಎಂದರು.

ಕಾಂಗ್ರೆಸ್ ವಿಶ್ವಾಸಕ್ಕೆ ಅರ್ಹವಲ್ಲ ಎಂಬುವುದು ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭ್ರಷ್ಟಾಚಾರ ಮಾಡಿ ಕೆಪಿಟಿಸಿಎಲ್ ಸತ್ಯಾನಾಶ ಮಾಡಿದ್ದರು. ಎಸ್.ಡಿ.ಪಿಐ ಹಾಗೂ ಪಿಎಫ್‌ಐ ತೆಗೆದು ರಾಷ್ಟ್ರದ್ರೋಹದ ಕಾರ್ಯದಲ್ಲಿ ತೊಡಗಿದವರು ನಮಗೆ ಹೇಳುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಿಜೆಪಿ ಬಿ ರಿಪೋರ್ಟ್ ಪಕ್ಷದ ಎಂಬ ಹೇಳಿಕೆ ಪ್ರತಿಕ್ರಿಯಿಸಿದರು.

ಹುಬ್ಬಳ್ಳಿ ಹಾಗೂ ಕಲಬುರ್ಗಿ ಕಾರ್ಯಕ್ರಮ ನೋಡಿ ಗಾಬರಿಯಾಗಿ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ. ಮೊದಲು ಅವರು ಡಿ.ಕೆ. ಶಿವಕುಮಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಸಿದ್ದರಾಮಯ್ಯ ಅವರು 11 ಬಜೆಟ್ ಮಂಡಿಸಿದವರು ಮುಖ್ಯಮಂತ್ರಿಯಾದವರಿಗೆ ಒಂದು ಕ್ಷೇತ್ರ ಸಿಗುತ್ತಿಲ್ಲ ಎಂದು ಕುಟುಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!