spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತಾಂತರ ನಿಲ್ಲಿಸದಿದ್ದರೆ ತೀವ್ರ ಪ್ರತಿಕ್ರಿಯೆ ಎದುರಿಸಬೇಕಾದೀತು: ಪ್ರಮೋದ್ ಮುತಾಲಿಕ್ ಎಚ್ಚರಿಕೆ

- Advertisement -Nitte

ಹೊಸದಿಗಂತ ವರದಿ, ವಿಜಯಪುರ:

ಮತಾಂತರ ಮಾಡುವುದು ದೇಶದ್ರೋಹಿ ಚಟುವಟಿಕೆ ಆಗಿದ್ದು, ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರಿಗೆ ತೀವ್ರ ಪ್ರತಿಕ್ರಿಯೆ ಕೊಡಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕ್ರಿಶ್ಚಿನ್ ಮಿಷಿನರಿಗಳಿಂದ ಮತಾಂತರ ಪಿಡುಗು ಹೆಚ್ಚಾಗುತ್ತಿದ್ದು, ಆಸೆಯ ಆಮಿಷಗಳನ್ನೊಡ್ಡಿ, ರೋಗ ನಿವಾರಣೆಯ ನೆಪದಲ್ಲಿ ಹಿಂದೂಗಳನ್ನು ಪುಸಲಾಯಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ದಲಿತರು, ಲಿಂಗಾಯತರು, ಬ್ರಾಹ್ಮಣರು ಕೂಡ ಬಲಿಯಾಗುತ್ತಿದ್ದು, ಇಂಥವರನ್ನು ಶ್ರೀರಾಮ ಸೇನೆ ಹಾಗೂ ಮಠಾಧೀಶರ ನೇತೃತ್ವದಲ್ಲಿ ಮತ್ತೆ ಘರವಾಪಸಿ ಮಾಡಲಾಗುತ್ತಿದೆ ಎಂದರು.
ಕ್ರಿಶ್ಚಿಯನ್ ಮಿಷಿನರಿಗಳು ಪ್ರಾರ್ಥನೆ ಮಾಡುತ್ತ ತಮ್ಮ ಪಾಡಿಗೆ ತಾವು ಇರಬೇಕು. ತೀವ್ರ ಪ್ರತಿಕ್ರಿಯೆ ಕೊಡಲಾಗುವುದು ಎಂದರು.
ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿಗೊಳಿಸುವಂತೆ 50 ಜನ ಮಠಾಧೀಶರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ನೀಲಕಂಠ ಕಂದಗಲ್, ರಾಕೇಶ ಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss