ಪೊರ್ಕಿ ಬೆಡಗಿಗೆ ಸೀಮಂತ ಶಾಸ್ತ್ರ, ಹಳದಿ ಸೀರೆಯುಟ್ಟು ಮಿಂಚಿದ ಪ್ರಣಿತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷಾ ತಾರೆಯಾಗಿ ಮಿಂಚಿರುವ ಕನ್ನಡದ ನಟಿ ಪ್ರಣಿತಾ ಸುಭಾಷ್‌ ಅಮ್ಮನಾಗುತ್ತಿರುವ ಸಂತೋಷದಲ್ಲಿದ್ದಾರೆ. ಪೊರ್ಕಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಣಿತಾ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸಿನಿಮಾ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಕೊರೊನಾ ಸಂರ್ಭದಲ್ಲಿ ಮೇ. 30, 2021 ರಂದು ಉದ್ಯಮಿ ನಿತಿನ್ ರಾಜು ಅವರೊಂದಿಗೆ ವಿವಾಹವಾದ ಬಳಿಕ ಸಿನಿಮಾ ಬಿಟ್ಟು ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ.

ಇತ್ತೀಚೆಗಷ್ಟೇ ನಾಯಕಿ ಪ್ರಣೀತಾ ತಾಯಿಯಾಗಲಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದರು. ಇದೀಗ ತನ್ನ ಅತ್ತೆ ಮನೆಯಲ್ಲಿ ಸಂಪ್ರದಾಯವಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!